Site icon PowerTV

ಬಾಲಕಿ ದಿವ್ಯಾ ಕುಟುಂಬಕ್ಕೆ 10 ಲಕ್ಷ ರೂ ಪರಿಹಾರ ಘೋಷಣೆ ಮಾಡಿದ ಸಿಎಂ.!

ಮಂಡ್ಯ; ಅತ್ಯಾಚಾರವೆಸಗಿ ಕೊಲೆಯಾದ ಯುವತಿ ಕುಟುಂಬಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಅವರು 10 ಲಕ್ಷ ರೂ ಪರಿಹಾರ ಘೋಷಣೆ ಮಾಡಿದ್ದಾರೆ.

ಮಂಡ್ಯ ಜಿಲ್ಲೆಯ ಮಳವಳ್ಳಿಯಲ್ಲಿ ಪಾಠಕ್ಕೆಂದು ತಮ್ಮ ಗುರುಗಳ ಮನೆಗೆ 10 ವರ್ಷದ ದಿವ್ಯಾ ತೆರಳಿದ್ದ ವೇಳೆ ಅತ್ಯಾಚಾರವೆಸಗಿ, ಕೊಲೆ ಮಾಡಿರುವ ಪೈಶಾಚಿಕ ಕೃತ್ಯ ನಡೆದಿತ್ತು. ಈ ಬಗ್ಗೆ ಮಂಡ್ಯದ ಕೆ.ಆರ್ ಪೇಟೆ ಅಂಬಿರಗರಹಳ್ಳಿಯ ತ್ರಿವೇಣಿ ಸಂಗಮದಲ್ಲಿ ಮಾತನಾಡಿದ ಸಿಎಂ, ಅತ್ಯಾಚಾರ, ಕೊಲೆಗೀಡಾಗಿರುವ 10 ವರ್ಷದ ಬಾಲಕಿ ದಿವ್ಯಾ ಕುಟುಂಬಕ್ಕೆ ರಾಜ್ಯ ಸರ್ಕಾರದಿಂದ 10 ಲಕ್ಷ ರೂ ಪರಿಹಾರ ನೀಡುವುದಾಗಿ ಸಿಎಂ ಘೋಷಿಸಿದರು.

ಈ ವೇಳೆ ಇಂದು ಬೆಳ್ಳಂ ಬೆಳಿಗ್ಗೆ ಧರ್ಮಸ್ಥಳ ಮಂಜುನಾಥನ ದರ್ಶನ ಪಡೆದುಕೊಂಡು ಬರುತ್ತಿದ್ದ ವೇಳೆಯಲ್ಲಿ ಟಿಟಿ ವಾಹನ ಹಾಗೂ ಬಸ್​ ಮತ್ತು ಟ್ಯಾಂಕರ್​ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಮೃತ ಪಟ್ಟ 9 ಜನರಿಗೆ ಪರಿಹಾರ ಘೋಷಿಸಿದರು.

ಅಪಘಾತ ವಿಚಾರ ಕುರಿತು ಸಂತಾಪ ವ್ಯಕ್ತಪಡಿಸಿದ ಬೋಮ್ಮಾಯಿ, ಈ ಘಟನೆಯಲ್ಲಿ ಮೃತ ಪಟ್ಟವರಿಗೆ ತಲಾ 2 ಲಕ್ಷ ಪರಿಹಾರ ನೀಡಲು ಸ್ಥಳದಲ್ಲಿ ಸಿಎಂ ತಿಳಿಸಿದರು.

Exit mobile version