Site icon PowerTV

ಧಾರಾಕಾರ ಮಳೆಗೆ ಸೋಯಾ ಬೆಳೆ ಹಾನಿ

ಬೀದರ್ :  ಜಿಲ್ಲೆಯಲ್ಲಿ ಎಡಬಿಡದೆ ಸುರಿದ ಮಳೆಗೆ ಸೋಯಾ ಬೆಳೆ ಹಾನಿಯಾಗಿದೆ. 5 ಲಕ್ಷ ಹೆಕ್ಟರ್ ಬೆಳೆದ ಸೋಯಾ ಬೆಳೆಯು ಸಂಪೂರ್ಣ ನೀರು ಪಾಲಾಗಿದೆ. ರೈತರು ಕಂಗಾಲಾಗಿದ್ದಾರೆ.

ಅದಲ್ಲದೇ, ಅಕ್ಟೋಬರ್ 18ರಂದು ಸಂಕಲ್ಪ ಯಾತ್ರೆಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರು ಬೀದರ್​ಗೆ ಆಗಮಿಸುತ್ತಿದ್ದು, ಬೆಳೆ‌ಗಳನ್ನು ಕಳೆದುಕೊಂಡ ಹುಮನಾಬಾದ್ ತಾಲೂಕಿನ ಸಿಂಧಕೇರಾ ರೈತ ಭೀಮರೆಡ್ಡಿ ತಮ್ಮ ಹೊಲಕ್ಕೆ ಭೇಟಿ ನೀಡುವಂತೆ ಮನವಿ ಮಾಡಿದ್ದಾರೆ.

ಇನ್ನು, ಹಾನಿಗೊಳಗಾದ ತಮ್ಮ ಹೊಲದಲ್ಲಿ ನಿಂತು ವಿಡಿಯೋ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆ ಮಾಡುವುದರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಮಾಡಿಕೊಂಡಿದ್ದಾರೆ.

Exit mobile version