Site icon PowerTV

ಇನ್ನೂ 4 ದಿನ ಮಳೆ ಸಾಧ್ಯತೆ

ಬೆಂಗಳೂರು : ವೀಕೆಂಡ್ ಬಂತು ಎಂಜಾಯ್ ಮಾಡಬೇಕು ಎಂದುಕೊಂಡಿದ್ದ ಬೆಂಗಳೂರಿಗರಿಗೆ ಮಳೆರಾಯ ಬ್ರೇಕ್ ನೀಡಿದ್ದಾನೆ. ಕಳೆದ ಎರಡು ದಿನದಿಂದ ನಗರದಲ್ಲಿ ಎಡಬಿಡದೆ ಮಳೆಯಾಗುತ್ತಿದ್ದು, ವೀಕೆಂಡ್ ಮೋಜು ಮಸ್ತಿಗೆ ಬ್ರೇಕ್ ನೀಡಿದ್ದಾನೆ.

ನಗರದಲ್ಲಿ ಇನ್ನೂ 4 ದಿನಗಳ ಕಾಲ ಜಿಟಿ ಜಿಟಿ ಮಳೆ ಇದ್ದು, ನಗರದಾದ್ಯಂತ ಮೋಡ ಮುಸುಕಿದ ವಾತಾವರಣವಿದೆ. ರಾತ್ರಿಯಿಂದ ಬೆಂಗಳೂರಿನ ಹಲವೆಡೆ ಜಡಿ ಮಳೆಯಾಗುತ್ತಿದ್ದು ಬೆಳ್ಳಂಬೆಳಗ್ಗೆ ಸಿಲಿಕಾನ್ ಸಿಟಿ ಕೂಲ್‌‌ ಕೂಲ್ ಆಗಿದೆ. ಮಳೆಗೆ ಬೆಂಗಳೂರಿನ ಹಲವು ಪ್ರಮುಖ ರಸ್ತೆಗಳು ನೀರಿನಿಂದ ಆವೃತವಾಗಿವೆ.

ರಾಜ್ಯದ ಸಚಿವರ ಸರ್ಕಾರಿ ನಿವಾಸದ ಮುಂಭಾಗದ ರಸ್ತೆಯಲ್ಲಿ ಕೂಡ ನೀರು ನಿಂತಿದೆ. ಸಚಿವ ಸಿಸಿ ಪಾಟೀಲ, ಮುರುಗೇಶ್ ನಿರಾಣಿ ಸೇರಿದಂತೆ ಏಳು ಸಚಿವ ಸರ್ಕಾರಿ ನಿವಾಸದ ಗೇಟ್ ಮುಂದೆ ನೀರು ಹರಿಯಲು ಸೂಕ್ತ ಡ್ರೈನೇಜ್ ವ್ಯವಸ್ಥೆ ಇಲ್ಲದ ಕಾರಣ ಮಳೆ ನೀರು ನಿಂತಿತ್ತು.

Exit mobile version