Site icon PowerTV

ಸಿದ್ದರಾಮಯ್ಯ ಜಿಮ್ ಮಾಡಿ ಚೆನ್ನಾಗಿರಲಿ, ನೂರು ವರ್ಷ ಬಾಳಲಿ; ಸಿಎಂ ಹಾರೈಕೆ

ಬೆಂಗಳೂರು: ಕಾಂಗ್ರೆಸ್​ನ ಭಾರತ್ ಜೋಡೋಗೆ ಅರ್ಥವೇ ಇಲ್ಲ. ಯಾಕೆ‌‌ ಈಗ ಭಾರತ್ ಜೋಡೋ ಮಾಡ್ತಿದ್ದಾರೆ. ಭಾರತ ಈಗ ಒಗ್ಗಟ್ಟಾಗಿ ನಡೆಯುತ್ತಿದೆ, ಮತ್ತೆ ಯಾಕೆ ಜೋಡಿಸುತ್ತಿದ್ದೀರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ವಾಗ್ದಾಳಿ ನಡೆಸಿದರು.

ಇಂದು ಭಾರತ್​ ಜೋಡೊ ಬಗ್ಗೆ ಮಾತನಾಡಿದ ಸಿಎಂ, ಸದ್ಯ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಮ್ಮ ದೇಶ ಮುಂದಿದೆ. ಇಡೀ ವಿಶ್ವದಲ್ಲಿ ನಮ್ಮ ಆರ್ಥಿಕತೆ ಮುಂದಿದೆ. ಹೀಗಿರುವಾಗ ಈ ಕಾಂಗ್ರೆಸ್ ಜೋಡೋಗೆ ಅರ್ಥವಿಲ್ಲ. ಕಾಂಗ್ರೆಸ್ ಅವರು ರಾಹುಲ್ ಅನ್ನೋ‌ ಮಿಸೈಲ್ ಬಿಟ್ಟಿದ್ದರು. ರಾಹುಲ್ ಅನ್ನೋ ಮಿಸೈಲ್ ಅದು ಫೇಲ್ ಆಗಿತ್ತು. ಈಗ ಮತ್ತೆ ಲಾಂಚ್ ಮಾಡೋಕೆ ಈ ಪಾದಯಾತ್ರೆ ಮಾಡ್ತಿದ್ದಾರೆ ಎಂದು ಭಾರತ್​ ಜೋಡೋ ಬಗ್ಗೆ ವ್ಯಂಗ್ಯವಾಡಿದರು.

ಮಾಜಿ ಸಿಎಂ ಸಿದ್ದರಾಮಯ್ಯ ಅವರು ಸಿಎಂ ಬೊಮ್ಮಾಯಿ ಅವರಿಗೆ 4 ಕಿಮೀ ನಡೆದು ತೋರಿಸಲಿ ಅಂತಾ ಸವಾಲು ವಿಚಾರವಾಗಿ ಮಾತನಾಡಿದ ಸಿಎಂ, ಖಂಡಿತವಾಗಿ ಸಿದ್ದರಾಮಯ್ಯ ಅವರಿಗೆ ನಡೆದು ತೋರಿಸೋಣ, ಅವರು ನನ್ನ ವೈಯಕ್ತಿಕ ವಿಚಾರದ ಬಗ್ಗೆ ಮಾತನಾಡಿದ್ದಾರೆ. ನಾನು ಆ ಮಟ್ಟಕ್ಕೆ ಹೋಗೋದಿಲ್ಲ. ಅವರ ಆರೋಗ್ಯ ಚೆನ್ನಾಗಿರಲಿ, ಜಿಮ್ ಎಲ್ಲಾ ಮಾಡಿ ಚೆನ್ನಾಗಿರಲಿ. ನೂರು ವರ್ಷ ಬಾಳಲಿ ಅಂತಾ ಹಾರೈಸುತ್ತೇನೆ ಎಂದರು.

ಇನ್ನು ರಾಜ್ಯದಲ್ಲಿ ಬಿಜೆಪಿ ಜನಸಂಕಲ್ಪ ಸಮಾವೇಶಕ್ಕೆ ಅಭೂತಪೂರ್ವ ಬೆಂಬಲ ಸಿಕ್ಕಿದೆ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಸಾಕಷ್ಟು ಬೆಂಬಲ ಸಿಗ್ತಿದೆ ಎಂದು ತಿಳಿಸಿದರು.

Exit mobile version