Site icon PowerTV

ನಿರುದ್ಯೋಗ ನಿವಾರಿಸಲು ಭಾರತ್​ ಜೋಡೊ ಯಾತ್ರೆ; ಬಳ್ಳಾರಿಯಲ್ಲಿ ರಾಹುಲ್​ ಮೇನಿಯಾ.!

ಬಳ್ಳಾರಿ: 3500 ಕಿಮೀ ನಡೆಯುವುದು ಸಾಮಾನ್ಯ ವಿಷಯವಲ್ಲ ಅಂತಾ ತಿಳಿದಿದ್ದೆ, ಪಾದಯಾತ್ರೆ ಆರಂಭದ ಬಳಿಕ ದಿನ ಕಳೆದಂತೆ ನಡಿಗೆ ಸುಲಭವಾಯ್ತು. ಯಾವುದೋ ಒಂದು ಶಕ್ತಿ ನಮಗೆ ನಡೆಯಲು ಅವಕಾಶ ಕೊಡುತ್ತಿದೆ ಎಂದು ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಹೇಳಿದ್ದಾರೆ.

ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಭಾರತ್ ಜೋಡೋ ಪಾದಯಾತ್ರೆ ಹಿನ್ನಲೆಯಲ್ಲಿ ಬಳ್ಳಾರಿಯಲ್ಲಿಂದು ಜನರನ್ನ ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಭಾರತ್​ ಜೋಡೊ ಯಾತ್ರೆಯಲ್ಲಿ ಎಲ್ಲರೂ ಭೇಟಿಯಾಗಿದ್ದಾರೆ. ಸಣ್ಣ ಮಗು ಬಂದು ಈ ವೇಳೆ ಮಾತನಾಡಿ ಪ್ರೋತ್ಸಾಹ ತುಂಬುತ್ತಿದ್ದಾರೆ. ಈ ಮಾತುಗಳು ನನಗೆ ಮುಂದೆ ಹೋಗಲು ಹೆಚ್ಚಿನ ಶಕ್ತಿ ತರುತ್ತಿದೆ ಎಂದು ಹೇಳಿದರು.

ಬಿಜೆಪಿ ಹಾಗೂ ಆರ್​ಎಸ್​ಎಸ್ ಭಾರತದ​ ವಿರುದ್ದ ಕೆಲಸ ಮಾಡುತ್ತಿದೆ. ವಿವಿಧ ಧರ್ಮದ ಭಾಷೆಯ ಜನರು ಈ ಯಾತ್ರೆಯಲ್ಲಿ ಭಾಗವಹಿಸಿದ್ದಾರೆ. ಈ ಯಾತ್ರೆಯಲ್ಲಿ ನಿಮಗೆ ಹಿಂಸೆ ಕಾಣುವುದಿಲ್ಲ. ಈ ವಿಚಾರಧಾರೆ ಕರ್ನಾಟಕ ಮಾತ್ರವಲ್ಲ ದೇಶದ ವಿಚಾರಧಾರೆ ಆಗಿದೆ. ಯಾರೇ ಎಷ್ಟೇ ಒತ್ತಡ ಹಾಕಿದ್ರೂ ನಿಮ್ಮ ವಿಚಾರಧಾರೆ ಬದಲಾವಣೆ ಮಾಡಲು ಸಾಧ್ಯವಿಲ್ಲ. ಯಾತ್ರೆ ನಡಿಗೆಯಲ್ಲಿ ಸಾಕಷ್ಟು ಯುವಕರನ್ನ ಭೇಟಿ ಮಾಡಿರುವೆ ಎಂದರು.

ಈ ವೇಳೆ ಯುವಕರಿಗೆ ನಿಮ್ಮ ಮುಂದಿನ ಭವಿಷ್ಯದಲ್ಲಿ ಏನ್ ಮಾಡ್ತೀರಾ ಅಂತಾ ಕೇಳಿರುವೆ, ಡಾಕ್ಟರ್, ಇಂಜಿನಿಯರ್, ಆಗುವುದಾಗಿ ಹೇಳುತ್ತಿದ್ದಾರೆ. ವಿದ್ಯಾಭ್ಯಾಸ ಮುಗಿದ ಬಳಿಕ ನಿಮಗೆ ಉದ್ಯೋಗ ಸಿಗುತ್ತದೇಯಾ ಎಂದು ಕೇಳಿದಾಗ ಯುವರಕಲ್ಲಿ ನೌಕರಿ ಸಿಗುವ ವಿಶ್ವಾಸವಿಲ್ಲ ಎಂದು ರಾಹುಲ್​ ನುಡಿದರು.

ಪ್ರಧಾನಿ ಮೋದಿ ಹೇಳಿದ್ರು ವರ್ಷ ಎರಡು ಕೋಟಿ ಉದ್ಯೋಗ ನೀಡುವುದಾಗಿ ಹೇಳಿದ್ರು, ಆದರೆ ಇದುವರೆಗೆ ಯಾವುದೇ ಉದ್ಯೋಗ ನೀಡುತ್ತಿಲ್ಲ. ಕರ್ನಾಟಕದಲ್ಲಿ ಪಿಎಸ್​ಐ ಆಗಬೇಕು ಅಂದ್ರೆ 80 ಲಕ್ಷ ಲಂಚ ಕೊಡಬೇಕು. ಕರ್ನಾಟಕದಲ್ಲಿ ನಿಮಗೆ ದುಡ್ಡು ಇದ್ರೆ ನೌಕರಿ ಪಡೆಯಬಹುದು. ಸಹಕಾರಿ ಸಂಘ, ಎಲ್ಲಾ ನೌಕರಿ ನೇಮಕದಲ್ಲಿ ಹಗರಣ ನಡೆದಿದೆ ಎಂದು ಆರೋಪ ಮಾಡಿದರು.

ಈ ಯಾತ್ರೆ ನಿರುದ್ಯೋಗ ಸಮಸ್ಯೆ ನಿವಾರಿಸಲು ಮಾಡುತ್ತಿದ್ದೇವೆ. ಬೆಲೆ ಏರಿಕೆ ಗಗನಕ್ಕೇರಿದೆ ಅದು ನಿಲ್ಲುತ್ತಿಲ್ಲ. ಮೋದಿ ಗ್ಯಾಸ್ 400 ರೂ ಕೊಡುವುದಾಗಿ ಹೇಳುತ್ತಿದ್ದಾರೆ. ಅದೇ ಸಿಲಿಂಡರ್ ಬೆಲೆ ಈಗ 1000 ರೂ ಆಗಿದೆ. ಆದರೆ ಮೋದಿ ಇದಕ್ಕೆ ಯಾಕೆ ಉತ್ತರ ನೀಡುತ್ತಿಲ್ಲ. ಒಂದು ಕಡೆ ನಿರುದ್ಯೋಗ ಮತ್ತೊಂದೆಡೆ ಬೆಲೆ ಏರಿಕೆ ಇದೆ ಎಂದರು.

Exit mobile version