Site icon PowerTV

ಮತಾಂತರ ನಿಷೇಧ ಕಾಯ್ದೆ ಜಾರಿಯಾದ ಬಳಿಕ ಮೊದಲ ಕೇಸ್​ ದಾಖಲು.!

ಬೆಂಗಳೂರು: ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿಯಾದ ಮೇಲೆ ಯಶವಂತಪುರ ಠಾಣೆಯಲ್ಲಿ ಮೊದಲ ಲವ್​​ ಜಿಹಾದ್​ ಆರೋಪದ ಅಡಿ ಪ್ರಕರಣ ದಾಖಲಾಗಿದೆ.

ಉತ್ತರ ಪ್ರದೇಶದ ಗೋರಖ್ ಪುರ ಮೂಲದ ಮೂಲಕ 18 ವರ್ಷದ ಯುವತಿಯನ್ನು ಮದುವೆಯ ಭರವಸೆ ನೀಡಿ ಯುವತಿಯ ಮತಾಂತರ ಮಾಡಿದ ಆರೋಪ ಕೇಳಿ ಬಂದ ಹಿನ್ನಲೆಯಲ್ಲಿ ಆರೋಪಿ ಸೈಯದ್ ಮುಯೀನ್ ವಿರುದ್ಧ ಯಶವಂತಪುರ ಠಾಣೆಯಲ್ಲಿ ಮತಾಂತರ ನಿಷೇಧ ಕಾಯ್ದೆಯಡಿ ಎಫ್​ಐಆರ್​ ದಾಖಲಿಸಲಾಗಿದೆ.

ಮತಾಂತರವಾದ ಯುವತಿಯ ತಂದೆ ಪೈಂಟಿಂಗ್ ಕೆಲಸ ಮಾಡಿಕೊಂಡಿದ್ರೆ ತಾಯಿ ಗೃಹಿಣಿಯಾಗಿದ್ದರು. ಇಬ್ಬರು ಸಹೋದರಿಯರು ಓರ್ವ ಸಹೋದರನೊಂದಿಗೆ ಯುವತಿ ವಾಸವಿದ್ದರು. ಯಶವಂತಪುರ ವ್ಯಾಪ್ತಿಯ ಬಿ.ಕೆ.ನಗರದಲ್ಲಿ 15 ವರ್ಷಗಳಿಂದ ವಾಸವಿದ್ದಾರೆ. ಮಗಳು ಅನ್ಯ ಧರ್ಮೀಯ ಯುವಕನನ್ನ ಪ್ರೀತಿಸುತ್ತಿದ್ದಾಳೆ ಎಂದು ಪೋಷಕರ ಕಿವಿಗೆ ಬೀಳುತ್ತಿದ್ದಂತೆ ಆರು ತಿಂಗಳ ಹಿಂದೆ ಮಗಳಿಗೆ ಬುದ್ಧಿವಾದ ಹೇಳಿದ್ದರು.

ಇದಾದ ಬಳಿಕ ಅಂಗಡಿಗೆ ಹೋಗಿ‌ಬರುವುದಾಗಿ ಅಕ್ಟೋಬರ್ 5ರಂದು‌ ಹೋದವಳು ವಾಪಾಸ್ ಬಂದಿರಲಿಲ್ಲ. ಈ ಬಗ್ಗೆ ಯಶವಂತಪುರ ಠಾಣೆಯಲ್ಲಿ ಯುವತಿ ಕಾಣೆ ಬಗ್ಗೆ ಕುಟುಂಬಸ್ಥರು ಪ್ರಕರಣ ದಾಖಲಿಸಿದ್ದರು. ವಾರದ ಬಳಿಕ ಬುರ್ಖಾ ಧರಿಸಿ ಪೊಲೀಸ್​ ಠಾಣೆಗೆ ಯುವತಿ ಬಂದಿದ್ದಾಳೆ. ಮತಾಂತರಗೊಂಡಿದ್ದ ಯುವತಿಯನ್ನ ಮದುವೆಯಾಗುವುದಾಗಿ‌ ಮುಯೀನ್ ಕರೆತಂದಿದ್ದಾನೆ. ಮಗಳ ನಡೆ ಕಂಡು ಗಾಬರಿಗೊಂಡ ಪೋಷಕರಿಂದ ಯಶವಂತಪುರ ಠಾಣೆಗೆ ಮತಾಂತರ ಕಾಯ್ದೆ ಅಡಿ ದೂರು ದಾಖಲಿಸಲಾಗಿದೆ.

ಮತಾಂತರ ಕಾಯ್ದೆ ಎಂದರೇನು..?

ಸಂವಿಧಾನದಲ್ಲಿ ಯಾವುದೇ ವ್ಯಕ್ತಿ ಸ್ವ ಇಚ್ಛೆಯಿಂದ ಮತಾಂತರವಾಗಬಹುದು. ಆದರೆ ಮತಾಂತರ ಪ್ರಕ್ರಿಯೆ ಕಾನೂನು ಬದ್ದವಾಗಿರಬೇಕು. ಮತಾಂತರ ವಾಗುವ ವ್ಯಕ್ತಿ ಪ್ರಾದೇಶಿಕ ಡಿಸಿಗೆ ಅರ್ಜಿ ಸಲ್ಲಿಸಬೇಕು. ಬಳಿಕ ಡಿ.ಸಿ ಆ ವ್ಯಕ್ತಿಯ ಪೋಷಕರು ಆಪ್ತರ ಹೇಳಿಕೆ ಪಡೆಯುತ್ತಾರೆ. ಇದಾದ ಬಳಿಕ 30 ದಿನಗಳ ಗಡವು ನೀಡುತ್ತಾರೆ. ಯಾವುದೇ ಒತ್ತಡವಿಲ್ಲದೆ ತಮ್ಮ ಇಷ್ಟದಂತೆ ಮತಾಂತರವಾಗುತಿದ್ದರೆ ಡಿಸಿ ಅನುಮತಿ ನೀಡುತ್ತಾರೆ.

ಯಾವುದೇ ಒತ್ತಡ ಅಥವಾ ಆಮಿಷಕ್ಕೆ ಬಲಿಯಾಗಿ ಮತಾಂತರ ವಾದರೆ ಕಾನೂನು ಕ್ರಮ, ಮತಾಂತರಕ್ಕೆ ಸಹಾಯ ಮಾಡುವ ಎಲ್ಲಾ ವ್ಯಕ್ತಿಗಳ ಮೇಲೆ ಕೂಡ ಎಫ್ಐಆರ್ ದಾಖಲಾಗುವುದು. ಸದ್ಯ ಇದೇ ಕಾಯ್ದೆಯಂತೆ ಮುಯೀನ್ ಹಾಗೂ ಆತನಿಗೆ ಸಹಾಯ‌ ಮಾಡಿದವರ ವಿರುದ್ಧ ಎಫ್ಐಆರ್ ದಾಖಲಾಗಿದೆ.

Exit mobile version