Site icon PowerTV

ಟ್ಯೂಷನ್‌ಗೆ ಬಂದಿದ್ದ ಬಾಲಕಿಯನ್ನು ಅತ್ಯಾಚಾರ ಮಾಡಿ ಕೊಲೆ ಮಾಡಿದ ಕೀಚಕ

ಮಂಡ್ಯ : 10ವರ್ಷದ ಬಾಲಕಿಯನ್ನು, ಟ್ಯೂಷನ್‌ಗೆ ಕರೆಸಿ ಅತ್ಯಾಚಾರ ಬಳಿಕ ಕೊಲೆ ಮಾಡಿದ ಘಟನೆ ಮಂಡ್ಯದಲ್ಲಿ ನಡೆದಿದೆ.

ಇನ್ನು, ಬಾಲಕಿ ರೇಪ್​ & ಮರ್ಡರ್​​ಗೆ ಬೆಚ್ಚಿಬಿದ್ದ ಮಳವಳ್ಳಿ, ಮರಣೋತ್ತರ ಪರೀಕ್ಷೆಯಲ್ಲಿ ಅತ್ಯಾಚಾರ ಸಾಬೀತಾಗಿದೆ. 10 ವರ್ಷದ ಬಾಲಕಿ ಮೇಲೆ 52 ವರ್ಷದ ಕಾಮುಕನ ಅಟ್ಟಹಾಸ ನಡೆದಿದ್ದು, ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಅದಲ್ಲದೇ, ಆರೋಪಿ ಕಾಂತರಾಜ್‌ ವಿರುದ್ಧ 307 ಸೆಕ್ಷನ್‌ ಸೇರ್ಪಡೆಗೊಂಡಿದ್ದು, ಬಾಲಕಿ ಕತ್ತು ಹಿಸುಕಿ ಸಂಪ್‌ಗೆ ಎಸೆದಿದ್ದಾನೆ. ಆರೋಪಿಯನ್ನ ಗಲ್ಲಿಗೇರಿಸುವಂತೆ ಬಾಲಕಿ ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲುಮುಟ್ಟಿದ್ದು, ಆರೋಪಿಯನ್ನ ಶೂಟ್‌ಔಟ್ ಮಾಡಿ ಸಾಯಿಸಿ, ಇಂತಹ ದೌರ್ಜನ್ಯ ಇನ್ಮುಂದೆ ಮರುಕಳಿಸಬಾರದು, ಹೆಣ್ಣು ಮಕ್ಕಳ ಮೇಲೆ ಕೈ ಹಾಕಬಾರದು, ಕಾಮುಕನನ್ನ ಗಲ್ಲಿಗೇರಿಸಿದ್ರೆ ನನ್ನ ಮಗಳ ಆತ್ಮಕ್ಕೆ ಶಾಂತಿ ಸಿಗುತ್ತೆ, ನನ್ನ ಮಗಳಿಗೆ ಆದ ಅನ್ಯಾಯ ಮತ್ಯಾರಿಗೂ ಆಗಬಾರದು ಎಂದು ಮೃತ ಬಾಲಕಿ ತಂದೆ ಸುರೇಶ್ ತಮ್ಮ ಅಳಲು ತೋಡಿಕೊಂಡಿದ್ದಾರೆ.

Exit mobile version