Site icon PowerTV

ಜೋರು ಮಳೆಗೆ ರಸ್ತೆಗಳು, ಬಡಾವಣೆಗಳು ಜಲಾವೃತ- ಚಾಮರಾಜನಗರ ಜನ ಹೈರಾಣ

ಚಾಮರಾಜನಗರ : ಗುರುವಾರ ರಾತ್ರಿಯಿಂದ ಇಂದು ಬೆಳಗ್ಗೆವರೆಗೂ ಬಿದ್ದ ಜೋರು ಮಳೆಯಾದ ಹಿನ್ನೆಲೆಯಲ್ಲಿ ಜೋಡಿ ರಸ್ತೆ, ಜಿಲ್ಲಾಡಳಿತ ಭವನ ಸೇರಿದಂತೆ‌ ಕೆಲ ಬಡಾವಣೆಗಳು ನೀರು ನುಗ್ಗಿ ಜಲಾವೃತವಾಗಿರುವ ಘಟನೆ ನಡೆದಿದೆ.

ಜಿಲ್ಲೆಯಲ್ಲಿ ಕೆಲ ದಿನಗಳಿಂದ ನಿಂತ್ತಿದ್ದ ಮಳೆರಾಯನ ಆರ್ಭಟ ಮತ್ತೆ ರಾತ್ರಿಯಿಂದ ಬೆಳಗ್ಗೆವರೆಗೂ ನಡೆದಿದ್ದು, ನಗರದ ಜನತೆ ಪರದಾಡುವಂತೆ ಮಾಡಿದೆ. ಜೋರು ಮಳೆ ಬಂತು ಎಂದರೆ ಸಾಕು ಮೊದಲಿಗೆ ಜೋಡಿ ರಸ್ತೆ ಹಾಗೂ ಜಿಲ್ಲಾಡಳಿತ ಭವನದ ಮುಂದೆ ರಸ್ತೆಗಳು ನೀರು ಹೋಗದೇ ನದಿಗಳಂತ್ತಾಗುತ್ತವೆ.

ಇನ್ನು, ರಸ್ತೆ ಆಗಲೀಕರಣದ ವೇಳೆ ಅವೈಜ್ಞಾನಿಕವಾಗಿ ರಸ್ತೆ ನಿರ್ಮಾಣ ಎಂಬ ಆರೋಪ ಕೇಳಿ ಬಂದಿದ್ದು, ಅರ್ಧಕ್ಕೆ ನಿಂತ್ತಿರುವ ರಸ್ತೆ ಕಾಮಗಾರಿಯಿಂದ ಕಳೆದ ಮೂರು ನಾಲ್ಕು ವರ್ಷಗಳಿಂದಲ್ಲೂ ನೀರು ನಗರದ ಮುಖ್ಯ ರಸ್ತೆಗೆ‌ ನುಗ್ಗುವುದರ ಜೊತೆ ಅಂಗಡಿ ಮುಂಗಟ್ಟು ಹಾಗೂ ಕೆಲ ಬಡಾವಣೆಗಳಿಗೂ ವ್ಯಾಪಿಸುತ್ತಿದೆ. ರಾತ್ರಿಯಿಂದ ಬೆಳಗ್ಗೆವರವಿಗೂ ಇಂದು ಬಿದ್ದ ಮಳೆಗೆ ನಗರದ ಅನೇಕ ಕಡೆ ಜಲಾವೃತವಾಗಿ ಜನರು ಪರದಾಡುವ ಸ್ಥಿತಿ ಇಂದು ಸಹ ನಿರ್ಮಾಣವಾಗಿದೆ.

ಅದಲ್ಲದೇ, 15ನೇ ವಾರ್ಡ್ ನ ಸೋಮಣ್ಣ ಲೇಔಟ್ ಮನೆಗಳಿಗೆ ನೀರು ನುಗ್ಗಿದ್ದು ಮಹಿಳೆಯರು, ವೃದ್ಧರನ್ನು ಆಗ್ನಿಶಾಮಕದಳದ ಸಿಬ್ಬಂದಿಗಳು ಸೂಕ್ತ ಸ್ಥಳಕ್ಕೆ ಸ್ಥಳಾಂತರ ಮಾಡಿದ್ದಾರೆ. ಬೀದಿಬದಿ ವ್ಯಾಪಾರ, ಸಂಚಾರ ಸಂಪೂರ್ಣ ಅಯೋಮಯವಾಗಿದೆ‌.

Exit mobile version