Site icon PowerTV

ಅಸ್ಸಾಂ ಸಿಎಂಗೆ ‘ಝಡ್-ಪ್ಲಸ್’ ಭದ್ರತೆ ನೀಡಿದ ಕೇಂದ್ರ ಸರ್ಕಾರ

ನವದೆಹಲಿ: ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ಭದ್ರತೆಯನ್ನ ಕೇಂದ್ರ ಸರ್ಕಾರ ಹೆಚ್ಚಿಸಿ ಉನ್ನತ ವರ್ಗದ ‘ಝಡ್-ಪ್ಲಸ್’ ಭದ್ರತೆಯನ್ನ ನೀಡಿದೆ.

53 ವರ್ಷದ ಹಿಮಂತ ಬಿಸ್ವಾ ಶರ್ಮಾ ಅವರ ಭದ್ರತೆ ಬಗ್ಗೆ ಪರಿಶೀಲಿಸಿ ಭದ್ರತಾ ಪಡೆಗಳೊಂದಿಗೆ ಕೇಂದ್ರ ಸರ್ಕಾರ ಮಾತುಕತೆ ನಡೆಸಿ ಅವರ ಭದ್ರತೆ ಹೆಚ್ಚಳ ಮಾಡಲಾಗಿದೆ. ಶರ್ಮಾ ಈಶಾನ್ಯ ರಾಜ್ಯಗಳಲ್ಲಿ ಅವರ ಪ್ರಯಾಣಕ್ಕಾಗಿ ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ವಿಐಪಿ ಭದ್ರತಾ ಘಟಕದಿಂದ ಒದಗಿಸಲಾಗಿದೆ. ಈಗಾಗಲೇ Z ಕೆಟಗರಿ ಸೆಕ್ಯೂರೆಟಿ ಶರ್ಮಾ ಹೊಂದಿದ್ದರು.

ಸಿಆರ್‌ಪಿಎಫ್‌ಗೆ ಅವರ ಭದ್ರತೆಯನ್ನು ಅಖಿಲ ಭಾರತ ಆಧಾರದ ಮೇಲೆ Z-ಪ್ಲಸ್‌ನ ಉನ್ನತ ವರ್ಗಕ್ಕೆ ಅಪ್‌ಗ್ರೇಡ್ ಮಾಡಲು ಗೃಹ ವ್ಯವಹಾರಗಳ ಸಚಿವಾಲಯ ನಿರ್ದೇಶಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದು ವರದಿ ತಿಳಿಸಿವೆ.

Exit mobile version