Site icon PowerTV

ಬಿಜೆಪಿ ಸೇರಲು ನಿರಾಕರಿಸಿದ್ದಕ್ಕೆ ದಾದಾಗೆ ಇಲ್ಲ ಬಿಸಿಸಿಐ ಅಧ್ಯಕ್ಷ ಪಟ್ಟ.!

ಬೆಂಗಳೂರು: ಇಷ್ಟು ದಿನ ಬಿಸಿಸಿಐ ಅಧ್ಯಕ್ಷ ಹುದ್ದೆಯಲ್ಲಿ ಕುಳಿತು ದಾದಾ ಕೊನೆಗೂ ಹುದ್ದೆಗೆ ವಿದಾಯ ಹೇಳುವ ಸಮಯ ಹತ್ತಿರವಾಗಿದೆ. ಬಿಸಿಸಿಐ ಅಧ್ಯಕ್ಷರಾಗಿ ಎರಡನೇ ಇನ್ನಿಂಗ್ಸ್ ಆಡಲು ಸಾಕಷ್ಟು ಕಸರತ್ತು ಮಾಡಿದ್ದ ಸೌರವ್ ಗಂಗೂಲಿಗೆ ಈ ಅವಕಾಶ ಕೈತಪ್ಪಿದೆ.

ಕೆಲವು ದಿನಗಳಿಂದ ಬಿಸಿಸಿಐ ಹಾಗೂ ಗಂಗೂಲಿ ಬಗ್ಗೆ ಎದ್ದಿರುವ ವದಂತಿ ಬಗ್ಗೆ ಭಾರತದ ಮಾಜಿ ಕ್ರಿಕೆಟಿಗ ಸೌರವ್ ಗಂಗೂಲಿ ಅಂತಿಮವಾಗಿ ಮೌನಮುರಿದಿದ್ದಾರೆ. ಇದರೊಂದಿಗೆ ಮಾಜಿ ಕ್ರಿಕೆಟಿಗ ರೋಜರ್ ಬಿನ್ನಿ ಯಾವುದೇ ವಿರೋಧವಿಲ್ಲದೆ ಬಿಸಿಸಿಐ ನೂತನ ಅಧ್ಯಕ್ಷರಾಗುವ ಸಾಧ್ಯತೆ ದಟ್ಟವಾಗಿದೆ.

ಬಿಸಿಸಿಐ ನೂತನ ಅಧ್ಯಕ್ಷರ ಕುರಿತ ಊಹಾಪೋಹಗಳ ಬಗ್ಗೆ ಸ್ವತಃ ಸೌರವ್ ಗಂಗೂಲಿ ಅವರೇ ಸ್ಪಷ್ಟನೇ ನೀಡಿ, ನಾನು ಅಡ್ಮಿನಿಸ್ಟ್ರೇಟರ್ ಆಗಿ ಸುದೀರ್ಘ ಇನ್ನಿಂಗ್ಸ್ ಆಡಿದ್ದು, ಈಗ ಬೇರೆ ಕೆಲಸಗಳತ್ತ ಗಮನ ಹರಿಸುವ ಸಮಯ ಬಂದಿದೆ ಎಂದಿದ್ದಾರೆ.

ಈ ಮಧ್ಯೆ, ಸೌರವ್ ಗಂಗೂಲಿ ಅವರು ಬಿಜೆಪಿ ಸೇರಲು ನಿರಾಕರಿಸಿದ್ದರಿಂದಲೇ 2ನೇ ಬಾರಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಅಧ್ಯಕ್ಷ ಆಗುವ ಅವಕಾಶವನ್ನು ಕಳೆದುಕೊಂಡಿದ್ದಾರೆ ಎಂದು ತೃಣಮೂಲ ಕಾಂಗ್ರೆಸ್ ಹೇಳುತ್ತಿದೆ.

Exit mobile version