Site icon PowerTV

ಅವಧಿ ಮುಗಿದ್ರೂ ಗಾಡಿ ಓಡಾಡಿದ್ರೆ ಸೀಜ್ ಮಾಡ್ತೀವಿ : ಬಿ.ಶ್ರೀರಾಮುಲು

ಗದಗ : ಅವಧಿ ಮುಗಿದ್ರೂ ಗಾಡಿ ಓಡಾಡಿದ್ರೆ ಸೀಜ್ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಗದಗನಲ್ಲಿ ಸಾರಿಗೆ ಸಚಿವ ಬಿ.ಶ್ರೀರಾಮುಲು ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನ್ರಿಗೆ ತೊಂದರೆ ಆಗಬಾರದು ಅಂತ ಓಲಾ-ಊಬರ್ ಗೆ ನೋಟೀಸ್ ಕೊಡಲಾಗಿದೆ. ನೋಟೀಸ್​​ಗೆ ಕ್ಲಾರಿಫಿಕೇಷನ್ ಕೊಡಬೇಕಿತ್ತು. ಲೈಸೆನ್ಸ್ ಕೋಡುವ ವೇಳೆ ಓಲಾ-ಊಬರ್ ಗೆ ಕಂಡೀಷನ್ ಮಾಡಲಾಗಿತ್ತು. ಆಟೋ ಪರವಾನಿಗೆ ಇಲ್ಲದೇ ಓಲಾ ಊಬರ್ ಓಡಿಸುತ್ತಿದ್ರು, ಸರ್ಕಾರಕ್ಕೇ ಗೊಂದಲ ಮೂಡಿಸುತ್ತಿದ್ದಾರೆ. ಓಲಾ ಊಬರ್ ಆ್ಯಪ್ ಗೆ ಮಾತ್ರ ತಡೆ ಇಡಲಾಗಿದೆ. ಬೇರೆ ಬೇರೆ ಟ್ಯಾಕ್ಸಿ, ಆಟೋಗಳು ಓಡಾಡಬಹುದು ಎಂದರು.

ಇನ್ನು, ಸಮಸ್ಯೆ ಸರಿಪಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಸಾರಿಗೆ ಅಧಿಕಾರಿಗಳ ೩ ನೋಟೀಸ್ ಗೂ ಕ್ಯಾರೆ ಅನ್ನದ ಓಲಾ ಊಬರ್, ಅಂತಹ ವಿಚಾರಕ್ಕೆ ಜಗ್ಗಲ್ಲ. ಕಾನೂನು ಬಾಹಿರ ಕೆಲಸ ಮಾಡಿದ್ರೆ ಸಹಿಸೋಲ್ಲ. ಯಾರೇ ಆದ್ರೂ ಕಾನೂನು ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ. ಈ ಬಗ್ಗೆ ಸಿರಿಯಸ್ ಆಗಿ ಮಾನಿಟರ್ ಮಾಡ್ತಿದ್ದೇನೆ ಎಂದು ಹೇಳಿದರು.

ಅದಲ್ಲದೇ, ಅವಧಿ ಮುಗಿದ್ರೂ ಗಾಡಿ ಓಡಾಡಿದ್ರೆ ಸೀಜ್ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಅವಧಿ ಮುಗಿದ್ರೂ, ಜನ್ರಿಗೆ ತೊಂದರೆ ಆಗಬಾರದು ಅಂತ ಮಾನವೀಯತೆ ದೃಷ್ಟಿಯಿಂದ ಸುಮ್ಮನಿದ್ದೆ. ಹೀಗೆ ಮುಂದುವರೆದ್ರೆ ಕಠಿಣ ಕ್ರಮ ಜರುಗಿಸುತ್ತೇನೆ. ಅವಕಾಶ ಸಿಕ್ರೆ ಸರ್ಕಾರದಿಂದ ಆ್ಯಪ್ ಮಾಡಿ ಕೊಡುತ್ತೇವೆ ಎಂದರು.

Exit mobile version