Site icon PowerTV

ಚುನಾವಣಾ ಕಣದಿಂದ ಸಚಿವ ಎಂಟಿಬಿ ನಾಗರಾಜ್ ಔಟ್.!

ಚಿಕ್ಕಬಳ್ಳಾಪುರ: ವಯಸ್ಸಾದ ಹಿನ್ನೆಲೆಯಲ್ಲಿ ಮಗನಿಗೆ ಅಖಾಡ ಸಿದ್ಧಗೊಳಿಸಲು ವಿಧಾನಸಭಾ ಚುನಾವಣಾ ಕಣದಿಂದ ಸಚಿವ ಎಂಟಿಬಿ ನಾಗರಾಜ್ ಹಿಂದೆ ಸರಿದಿದ್ದಾರೆ.

ಮುಂಬರುವ ಚುನಾವಣೆಯಲ್ಲಿ ಹೊಸಕೋಟೆ ಮತಕ್ಷೇತ್ರದಿಂದ ನನ್ನ ಮಗನಿಗೆ ಬಿಜೆಪಿ ಟಿಕೆಟ್ ಕೊಡಿಸುತ್ತೇನೆ. ನನಗೆ ರಾಜಕೀಯ ಸಾಕಾಗಿದೆ ನನ್ನ ಮಗನಿಗೆ ಸ್ಪರ್ಧೆ ಮಾಡಲಿದ್ದಾರೆ ಎಂದು ಎಂಟಿಬಿ ನಾಗಾರಾಜ್​ ಹೇಳಿದ್ದಾರೆ.

ನಾನು ಎಂ.ಎಲ್.ಸಿ ಆಗಿ ಇನ್ನೂ ಮೂರು ವರ್ಷ ಅವಧಿ ಇದೆ. ಮಗ ನಿತಿನ್ ಪುರುಷೋತ್ತಮ್ ರಾಜೇಶ್ ಗೆ ಬಿಜೆಪಿ ಟಿಕೆಟ್ ಕೊಡಿಸುತ್ತೇನೆ ಎಂದು ಎಂಟಿಬಿ ಹೇಳಿದ್ದಾರೆ.

ಇಷ್ಟು ದಿನ ಎಂಟಿ ನಾಗರಾಜ್​ ಅವರ ಮಗ ನಿತಿನ್ ಪುರುಷೋತ್ತಮ್ ಅವರು ಕಾಂಗ್ರೆಸ್​ ಪಕ್ಷದಲ್ಲಿ ಗುರುತಿಸಿಕೊಂಡಿದ್ದರು. ಇದಕ್ಕೆ ಮುಂದಿನ ದಿನಗಳಲ್ಲಿ ಎಂಟಿಬಿ ಮಗ ಕಾಂಗ್ರೆಸ್​ ನಿಂದ ಸ್ಪರ್ಧೆ ಮಾಡಲಿದ್ದಾರೆ ಎಂದು ಬಣ್ಣಿಸಲಾಗಿತ್ತು. ಇದಕ್ಕೆ ಇಂದು ಉತ್ತರಿಸಿದ ಸಚಿವ ನಾಗರಾಜ್​, ಮಗ ಕಾಂಗ್ರೆಸ್ ಸೇರುವ ಪ್ರಸ್ತಾಪ ತಳ್ಳಿ ಹಾಕಿದ್ದಾರೆ.

Exit mobile version