Site icon PowerTV

ಮೀನುಗಾರ ಬೀಸಿದ ಬಲೆಗೆ ಮೀನುಗಳ ರಾಶಿ

ಮಂಗಳೂರು: ಕಡಲ ತೀರದಿಂದ ಮೀನುಗಾರ ಬೀಸಿದ ಬಲೆಗೆ ಭಾರೀ ಪ್ರಮಾಣದ ಮೀನುಗಳ ರಾಶಿ ಸಿಕ್ಕಿರುವ ಘಟನೆ ಮಂಗಳೂರಿನ ಸುರತ್ಕಲ್ ಗೊಡ್ಡೆಕೊಪ್ಲ ಕಡಲ ಕಿನಾರೆಯಲ್ಲಿ ನಡೆದಿದೆ.

ಜೀವನ್ ಪಿರೇರಾ ಎಂಬವರು ಬೀಸಿದ ಕೈರಂಪಣಿ ಬಲೆಗೆ ಮೀನುಗಳ ರಾಶಿ ಬಿದ್ದಿದೆ. ಬಂಗುಡೆ, ಕೊಡ್ಡಾಯಿ, ಬೂತಾಯಿ ಮೀನುಗಳ ಮಹಾಬೇಟೆಯಾಗಿದ್ದು ಮೀನುಗಾರ ಖುಷ್ ಆಗಿದ್ದಾನೆ.

ಒಂದೇ ಬಲೆಗೆ ಸುಮಾರು 400ಕ್ಕೂ ಅಧಿಕ ಕೆಜಿ ಮೀನು ಸಿಕ್ಕಿದೆ. ಫ್ರೆಶ್ ಮೀನುಗಳ ಖರೀದಿಗೆ ಸ್ಥಳೀಯ ಜನರು ಮುಗಿಬಿದ್ದಿದ್ದಾರೆ. ದಡದಿಂದ ಕೈರಂಪಣಿ ಬಲೆ ಹಾಕುವುದು ಸಾಮಾನ್ಯ. ಆದರೆ ಈ ಬಾರಿ ಮೀನುಗಳ ರಾಶಿಯೇ ದಡದಲ್ಲೇ ಸಿಕ್ಕಿದೆ.

Exit mobile version