Site icon PowerTV

ಒತ್ತುವರಿ ತೆರವು ಕಾರ್ಯಾಚರಣೆ ವೇಳೆ ದಂಪತಿ ಹೈಡ್ರಾಮಾ

ಬೆಂಗಳೂರು : ಒತ್ತುವರಿ ತೆರವು ಕಾರ್ಯಾಚರಣೆ ವೇಳೆ ದಂಪತಿ ಆತ್ಮಹತ್ಯೆ ಬೆದರಿಕೆ ಮಾಡಿದ ಘಟನೆ ಕೆ.ಆರ್​.ಪುರಂನಲ್ಲಿ ನಡೆದಿದೆ.

ನಗರದಲ್ಲಿ, ಪೆಟ್ರೋಲ್​​ ಸುರಿದುಕೊಂಡು ಮಹಿಳೆ ರಂಪಾಟ ಮಾಡಿದ್ದು, ಯಾವುದೇ ಕಾರಣಕ್ಕೂ ಮನೆ ಕೆಡವಲು ಬಿಡಲ್ಲ, ಬಿಬಿಎಂಪಿ ಅಧಿಕಾರಿಗಳ ಜೊತೆ ದಂಪತಿ ವಾಗ್ವಾದ ಮಾಡಿದ್ದು, ಮನೆ ಗೋಡೆ ತೆರವು ಮಾಡಿದ್ರೆ ಆತ್ಮಹತ್ಯೆ ಬೆದರಿಕೆ ಮಾಡಿದ್ದಾರೆ.

ಇನ್ನು, ಕೈಲಿ ಪೆಟ್ರೋಲ್ ಹಿಡಿದು ಅಧಿಕಾರಿಗಳಿಗೆ ಶಾಕ್​ ನೀಡಿದ್ದು, ನಾವು ಇಲ್ಲಿಯವರೇ. ಇಲ್ಲಿ ಹುಟ್ಟಿ ಇಲ್ಲೇ ಬೆಳೆದಿದ್ದೇವೆ. ಮನೆ ಕಟ್ಟುವಾಗ ಇಲ್ಲದ ರಾಜಕಾಲುವೆ ಈಗ ಎಲ್ಲಿಂದ ಬಂತು..? ನಾವೇನು ಪಾಕಿಸ್ತಾನದಿಂದ ಬಂದವರಾ..? ನಾವೂ ಕರ್ನಾಟಕದವರೇ ನಮ್ಮ ಮನೆ ಕೆಡುವುತಾರೆ ಅಂದ್ರೆ ನಮಗೆ ಪರಿಹಾರಬೇಕು ಇಲ್ಲದಿದ್ರೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಳ್ತೇವೆಂದು ದಂಪತಿ ಬೆದರಿಕೆ ಮಾಡಿದ್ದಾರೆ.

Exit mobile version