Site icon PowerTV

ಸಿದ್ದರಾಮಯ್ಯ‌ ವಿರುದ್ಧ ಲೋಕಾಯುಕ್ತದಲ್ಲಿ ದೂರು ದಾಖಲು

ಬೆಂಗಳೂರು: ಸರ್ಕಾರಿ ಸ್ವತ್ತನ್ನ ಡಿನೊಟಿಫೈ ಮಾಡಿರೋ ಆರೋಪದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ‌ ಅವರ ವಿರುದ್ಧ ಲೋಕಾಯುಕ್ತದಲ್ಲಿ ದೂರು ದಾಖಲಾಗಿದೆ.

ಕಾನೂನಿನ ನಿಯಮಗಳನ್ನ ಗಾಳಿಗೆ ತೂರಿ ಸರ್ಕಾರಿ ಸ್ವತ್ತನ್ನ ಸಿದ್ದರಾಮಯ್ಯ ಅವರು ಡಿನೊಟಿಫೈ ಮಾಡಿದ್ದಾರೆಂದು ಬಿಜೆಪಿ ಮುಖಂಡ ಎನ್ ಆರ್ ರಮೇಶ್ ರಿಂದ ಲೋಕಾಯುಕ್ತದಲ್ಲಿ ದೂರು ನೀಡಲಾಗಿದೆ.

200 ಕೋಟಿ ಸರ್ಕಾರಿ ಸ್ವತ್ತನ್ನು ಡಿ-ನೋಟಿಫಿಕೇಷನ್ ಮಾಡಿದ್ದಾರೆಂದು ಆರೋಪ ಮಾಡಿದ ರಮೇಶ್​, ಲಾಲ್‍ ಬಾಗ್ ಸಿದ್ಧಾಪುರ ಗ್ರಾಮದ 2 ಎಕರೆ 39.5 ಗುಂಟೆ ಜಮೀನು ದುರುಪಯೋಗ ಪಡಿಸಿಕೊಂಡಿದ್ದಾರೆ. ಬಿಡಿಎ ಉದ್ಯಾನವನ ಸಾರ್ವಜನಿಕ ಬಳಕೆಗೆ ಮೀಸಲಿಟ್ಟ ಜಾಗವನ್ನ ಬಿಲ್ಡರ್ ಗೆ ಅನುಕೂಲ ಮಾಡಿಕೊಟ್ಟಿದ್ದಾರೆ, ನಿಗಧಿತ ಜಾಗದಲ್ಲಿ ಹಲವು ನರ್ಸರಿಗಳು ಕಾರ್ಯ ನಿರ್ವಹಿಸುತ್ತಿದ್ದ ಜಾಗ, ಅಶೋಕ್ ಧಾರಿವಾಲ್ ಖಾಸಗಿ ಬಿಲ್ಡರ್ ಗೆ ಅನುಕೂಲಮಾಡಿಕೊಟ್ಟಿದ್ದಾರೆಂದು ಆರೋಪ ಮಾಡಲಾಗಿದೆ.

ವಾಣಿಜ್ಯ ಸಂಕೀರ್ಣಕ್ಕಾಗಿ 2013 ರಲ್ಲಿ ಉದ್ಯಮಿ ಅಶೋಕಗ ಧಾರಿವಾಲ್ ಸಲ್ಲಿಸಿದ ಅರ್ಜಿಯನ್ನ ತಿರಸ್ಕಾರ ಮಾಡಿದ್ದ ರಾಜ್ಯ ಸರ್ಕಾರ, ಆದರೆ, ಅಶೋಕ್ ಧಾರಿವಾಲ್ ಸಲ್ಲಿಸಿದ್ದ ಅರ್ಜಿಗಳನ್ನ 2014 ರಲ್ಲಿ ಅಶೋಕ್ ಧಾರಿವಾಲ್ ಅರ್ಜಿ ಸಲ್ಲಿಸುತ್ತಿದ್ದಂತೆ ಅನುಮೋದನೆ  ನೀಡಿ ರಾಜ್ಯ ಸರ್ಕಾರ ಆದೇಶಿಸಿತ್ತು.

ಬಿಡಿಎ ಈ ಜಾಗವನ್ನ ಪಾರ್ಕ್, ಸಾರ್ವಜನಿಕ ಬಳಕೆಗೆ ಮೀಸಲಿಟ್ಟಿತ್ತು. ಸಾರ್ವಜನಿಕರ ಬಳಕೆಗೆ ಮೀಸಲಿಟ್ಟ ಜಾಗವನ್ನ ಅಭಿವೃದ್ಧಿ ಮಾಡುವಂತಿಲ್ಲ. ಆದರೆ ಕಾನೂನು ಬಾಹಿರವಾಗಿ ಡಿ ನೋಟಿಪಿಕೇಶನ್​ ಮಾಡಲು ಸಹಕರಿಸಿದ ಅಂದಿನ ಬಿಡಿಎ ಆಯುಕ್ತ ಶ್ಯಾಂ ಭಟ್ ವಿರುದ್ಧವೂ ದೂರು ನೀಡಿ ರಮೇಶ್​ ಈ ಕೂಡಲೇ ಸಿಐಡಿ ತನಿಖೆಗೆ ವಹಿಸುವಂತೆ ಆಗ್ರಹಿಸಿದರು.

Exit mobile version