Site icon PowerTV

ರಾಜ್ಯದಲ್ಲಿ ಸಿಡಿಲು ಬಡಿದು ಮೂವರ ಸಾವು.!

ಕಲಬುರಗಿ; ಸಿಡಿಲು ಬಡಿದು ತಂದೆ ಮಗ ಸಾವನ್ನೊಪ್ಪಿದ ಘಟನೆ ಜಿಲ್ಲೆಯ ಸೇಡಂ ತಾಲೂಕಿನ ಕಡಚರ್ಲಾ ಗ್ರಾಮದಲ್ಲಿ ನಡೆದಿದೆ.

ತುಳಚಾ ನಾಯಕ ರಾಠೋಡ್ (40) ಅವೀನ್ ರಾಠೋಡ್ (16) ಮೃತರಾಗಿದ್ದಾರೆ. ಸೇಡಂ ತಾಲೂಕಿನ ಪಿಲ್ಲಿಗುಂಟಾ ತಾಂಡಾದ ನಿವಾಸಿಗಳಾಗಿದ್ದು, ಕೂಲಿ ಕೆಲಸಕ್ಕೆ ಹೋಗಿದ್ದಾಗ ಸಿಡಿಲು ಬಡಿದ ಪರಿಣಾಮ ಸ್ಥಳದಲ್ಲೇ ಸಾವನ್ನೊಪ್ಪಿದ್ದಾರೆ.

ಅದರಂತೆ ಸಿಡಿಲು ಬಡಿದು ಓರ್ವ ಯುವಕ ನಿಧನರಾದ ಘಟನೆ ಬಾಗಲಕೋಟೆ ಜಿಲ್ಲೆಯ ವರ್ಚಗಲ್ ಗ್ರಾಮದಲ್ಲಿ ನಡೆದಿದೆ. ಹೊಲದಲ್ಲಿ ಬಿರುಸಿನ ಮಳೆಯಲ್ಲಿ ಈರುಳ್ಳಿಗೆ ತಾಡಪಲ್ ಹೊದಿಸುವಾಗ ಸಿಡಿಲು ಬಡಿದು ಕೃಷ್ಣಪ್ಪ ಗುಡದನ್ನವರ (30) ಸಾವನ್ನೊಪ್ಪಿದ್ದಾನೆ.

ಘಟನೆ ಬೆನ್ನಲ್ಲೆ ಲೋಕಾಪೂರ ಉಪತಹಶೀಲ್ದಾರ ಮಹೇಶ ಪಾಂಡವ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಲೋಕಾಪೂರ ಪೋಲಿಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Exit mobile version