ಓಲಾ, ಉಬರ್‌ ಹಗಲು ದರೋಡೆಗೆ ಕೊನೆಗೂ ಬಿತ್ತು ಬ್ರೇಕ್‌..!

ಬೆಂಗಳೂರು : ಓಲಾ, ಉಬರ್‌ ಕಂಪನಿಗಳಿಗೆ ಸೆಡ್ಡು ಹೊಡೆದ ಆಟೋ ಚಾಲಕರು ಗ್ರಾಹಕ, ಚಾಲಕರ ಸುಲಿಗೆ ಮಾಡ್ತಿದ್ದ ಕಂಪನಿಗಳಿಗೆ ಮರ್ಮಾಘಾತ ನೀಡಿದ್ದಾರೆ.

ಕನಿಷ್ಠ ದರ 100 ರೂಪಾಯಿ ವಸೂಲಿ ಮಾಡ್ತಿದ್ದ ಓಲಾ,ಉಬರ್‌ ಡ್ರಾಪ್​ಗೆ ಟಕ್ಕರ್‌ ಕೊಡಲು ‘ನಮ್ಮ ಯಾತ್ರಿ’ ಆ್ಯಪ್‌ ರಚಿಸಿದ್ದಾರೆ. ಮಧ್ಯವರ್ತಿಗಳ ಕಾಟವಿಲ್ಲದೆ ಆಟೋ ಚಾಲಕರಿಂದ ನೂತನ ಆ್ಯಪ್‌ ರಚಿಸಿದ ಬೆಂಗಳೂರು ಆಟೋ ಯೂನಿಯನ್‌, ನವೆಂಬರ್‌ 1ರಂದು ನೂತನ ಆ್ಯಪ್‌ ಬಿಡುಗಡೆಗೆ ನಿರ್ಧಾರ ಮಾಡಿದ್ದಾರೆ.

ಇನ್ನು, ಚಾಲಕರಿಗೆ ಈಗಾಗಲೇ ‘ನಮ್ಮ ಯಾತ್ರಿ’ ಆ್ಯಪ್ ಲಭ್ಯವಿದೆ. ಪ್ರಯಾಣಿಕರಿಗೆ ನವೆಂಬರ್‌ 1ರಿಂದ ಬುಕ್ಕಿಂಗ್‌ ಸೇವೆ 2 ಕಿಲೋ ಮೀಟರ್‌ಗೆ ಕೇವಲ 30 ರೂಪಾಯಿ ಫಿಕ್ಸ್‌ ಆಗಿದ್ದು, ಬುಕ್ಕಿಂಗ್‌ ಚಾರ್ಚ್‌ 10 ರೂ..ಕೇವಲ 40 ರೂಪಾಯಿಯಲ್ಲಿ ಆಟೋ ಸರ್ವಿಸ್‌ ಆಗಲಿದೆ.

RELATED ARTICLES

Related Articles

TRENDING ARTICLES