Site icon PowerTV

ಮಿನಿ ಪಾಕಿಸ್ತಾನ ಅಂತ ವಾಟ್ಸಾಪ್​ ಸ್ಟೇಟಸ್​; ರಾಜ್ಯದಲ್ಲೊಬ್ಬ ಪಾಕ್​ ಪ್ರೇಮಿ.!

ಹಾಸನ: ಚನ್ನರಾಯಪಟ್ಟಣದ ಬಾಗೂರು ರಸ್ತೆಯನ್ನ ಮಿನಿ ಪಾಕಿಸ್ತಾನ ಎಂದು ವಾಟ್ಸಾಪ್​​ ಸ್ಟೇಟಸ್ ಯುವಕನೊಬ್ಬ ಹಾಕಿಕೊಂಡು ದೇಶ ವಿರೋಧಿ ಚಟುವಟಿಕೆ ಮಾಡಿದ್ದಾನೆ.
ಜಿಲ್ಲೆಯ ಚನ್ನರಾಯಪಟ್ಟಣದ ಬಾಗೂರು ರಸ್ತೆಯನ್ನ ನೆಮ್ಮಾನ್ ಎಂಬ ಯುವಕ ಮಿನಿ ಪಾಕಿಸ್ತಾನ ಅಂತಾ ಸ್ಟೇಟಸ್ ಹಾಕಿದ್ದಾನೆ. ಈದ್ ಮಿಲಾದ್ ಹಬ್ಬದ ಪ್ರಯುಕ್ತವಾಗಿ ಮುಸ್ಲಿಂ ಬಾಂಧವರು ಬಾಗೂರು ರಸ್ತೆಯನ್ನ ಬಂಟಿಗ್ಸ್ ಹಾಗೂ ಬ್ಯಾನರ್ ಅಳವಡಿಸಿದ್ದರು. ಅದನ್ನ ವಿಡಿಯೋ ಮಾಡಿ, ಅದಕ್ಕೆ ಸಾಂಗ್ ಎಡಿಟ್ ಮಾಡಿ ಪಾಕ್​​ಗೆ ಬೆಂಬಲಿಸಿ ಸ್ಟೇಟಸ್ ಹಾಕಿದ್ದಾನೆ.
ನೆಮ್ಮಾನ್ ವಿಡಿಯೋ ಅಪ್ ಲೋಡ್ ಮಾಡೋ ವೇಳೆ ಮಿನಿ ಪಾಕಿಸ್ತಾನ್ ಬಾಗೂರು ರೋಡ್, ಈದ್ ಮಿಲಾದ್ ಎಂದು ಬರೆದುಕೊಂಡಿದ್ದಕ್ಕೆ ಹಿಂದೂಪರ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ.
ಅಲ್ಲದೇ, ಈ ಯುವಕನ ಸ್ಟೇಟಸ್​ ಕುರಿತು ಹಿಂದೂಪರ ಸಂಘಟನೆಗಳಿಂದಲೂ ತೀವ್ರ ವಿರೋಧಪಡಿಸಿದ್ದು, ಸ್ಟೇಟಸ್ ಹಾಕಿದ ಯುವಕನನ್ನ ಸದ್ಯ ವಶಕ್ಕೆ ಪಡೆದು‌ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
Exit mobile version