Site icon PowerTV

ರಾಜ್ಯದಲ್ಲಿ ಮತ್ತೊಮ್ಮೆ 150 ಸ್ಥಾನ ಗೆಲ್ಲೋದೆ ನಮ್ಮ ಗುರಿ : ನಳೀನ್ ಕುಮಾರ್ ಕಟೀಲ್

ಬೆಂಗಳೂರು : ರಾಹುಲ್ ಗಾಂಧಿಯನ್ನೂ ಕೂಡಾ ಸಿದ್ದರಾಮಯ್ಯ ಬೇರೆ ದಾರಿಯಲ್ಲಿ ಕರೆದುಕೊಂಡು ಹೋಗ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ್ಯ ನಳೀನ್ ಕುಮಾರ್ ಕಟೀಲ್ ಹೇಳಿದರು.

ರಾಜ್ಯ ಬಿಜೆಪಿ ಕಛೇರಿಯಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆಯಲ್ಲಿ ಮಾತನಾಡಿದ ಅವರು, ಇಡೀ ದೇಶಕ್ಕೆ ರಾಮಾಯಣ ವನ್ನ ಪರಿಚಯಿಸಿದ ಪುಣ್ಯಾತ್ಮ ವಾಲ್ಮೀಕಿ. ವಾಲ್ಮೀಕಿ ಆಚರಣೆ ಸರ್ಕಾರದ ವತಿಯಿಂದ ಆಚರಣೆ ಮಾಡುತ್ತಿರೋದು ಸಂತೋಷ ಎಂದರು.

ಇನ್ನು, ಬಿಜೆಪಿಯಿಂದ ರಾಜ್ಯಪ್ರವಾಸ ಹಿನ್ನಲೆಯಲ್ಲಿ ಎರಡು ತಂಡಗಳಾಗಿ ಯಾತ್ರೆಗೆ ಸಿದ್ದ ಪಡಿಸಿದ್ದೇವೆ. ಒಂದು ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಮತ್ತೆ ಒಂದು ತಂಡ. ಮತ್ತೊಂದು ಯಡಿಯೂರಪ್ಪ ನೇತೃತ್ವದಲ್ಲಿ ಒಂದು ತಂಡ ರಚನೆಯಾಗಿದೆ. ಈಗಾಗಲೇ ನಾನು ಚಾಲನೆ ಕೊಟ್ಟಿದ್ದೇನೆ. 11 ನೇ ತಾರೀಖಿನಿಂದ ಮತ್ತೆ ಪ್ರವಾಸ ಶುರುವಾಗಲಿದೆ. ಅರಣ್ ಸಿಂಗ್ ರವರು ಚಾಲನೆ ನೀಡಲಿದ್ದಾರೆ ಎಂದು ಹೇಳಿದರು.

ಅದಲ್ಲದೇ, ರಾಜ್ಯದಲ್ಲಿ ಮತ್ತೊಮ್ಮೆ 150 ಸ್ಥಾನ ಗೆಲ್ಲೋದೆ ನಮ್ಮ ಗುರಿ, ರಾಜ್ಯ ಸರ್ಕಾರ ಈಗಾಗಲೇ ಕ್ರಮ ಕೈಗೊಂಡಿದೆ. ಇನ್ನುಳಿದದನ್ನ ಕೇಂದ್ರ ಸರ್ಕಾರ ಆದಷ್ಟು ಬೇಗ ಪೂರ್ಣಗೊಳಿಸಲಿದೆ. ಸಿದ್ದರಾಮಯ್ಯ ಟಿಪ್ಪುವನ್ನ ಮೆರಿಸಲು ಕೊಡಗಿಗೆ ಹೋಗಿದ್ರು ರಾಹುಲ್ ಗಾಂಧಿಯನ್ನೂ ಕೂಡಾ ಸಿದ್ದರಾಮಯ್ಯ ಬೇರೆ ದಾರಿಯಲ್ಲಿ ಕರೆದುಕೊಂಡು ಹೋಗ್ತಿದ್ದಾರೆ. ಮೊದಲು ಕೊಡಗಿಗೆ ಹೋಗಿ ಮತಾಂದರವನ್ನ ಎದುರಿಸಿ ಬನ್ನಿ. ಅಲ್ಲಿರುವ ಹತ್ಯೆಗಳು ಸಮಾಜ ಘಾತುಕ ಕೆಲಸಗಳನ್ನ ಮರೆಸುವ ಕೆಲಸವನ್ನ ಮಾಡ್ತಿದ್ದಾರೆ. ಅದೇ ವಿಚಾರಕ್ಕೆ ನಾವು ಟಿಪ್ಪು ಹೆಸರನ್ನ ಬದಲಿಸಿ. ರಾಜ್ಯಕ್ಕೆ ಕೊಡುಗೆ ನೀಡಿದ ಒಡೆಯರ್​ರವರ ಹೆಸರನ್ನು ಇಡಲಾಗಿದೆ ಎಂದರು.

Exit mobile version