Site icon PowerTV

ಚಿರತೆ ದಾಳಿಗೆ ಕುರಿ, ಮೇಕೆಗಳು ಬಲಿ

ಚಿಕ್ಕಬಳ್ಳಾಪುರ : ಕಾಡಿನಿಂದ ನಾಡಿಗೆ ಲಗ್ಗೆ ಇಡುತ್ತಿರುವ ಕಾಡು ಪ್ರಾಣಿಗಳು ರೈತರು ನಿದ್ದೆಗೆಡುವಂತೆ ಮಾಡಿ ಬಿಡ್ತಿವೆ. ರಾತ್ರೋರಾತ್ರಿ ನಾಡಿಗೆ ಬಂದ ಚಿರತೆ ಕುರಿ, ಮೇಕೆಗಳ ಮಾರಣಹೋಮ ನಡೆಸಿದೆ.

ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲ್ಲೂಕಿನ ಎಂ.ಗುಂಡ್ಲಹಳ್ಳಿ ಗ್ರಾಮದಲ್ಲಿ ಕುರಿ ಹಟ್ಟಿ ಮೇಲೆ ಚಿರತೆ ದಾಳಿ ನಡೆಸಿದ್ದು, 11 ಕುರಿ ಮತ್ತು ಮೇಕೆಗಳನ್ನು ಬಲಿ ಪಡೆದಿದೆ. ರೈತ ಹನುಮಂತರಾಯಪ್ಪ ಎಂಬುವವರಿಗೆ ಸೇರಿದ ಕುರಿಮೇಕೆಗಳಾಗಿದ್ದು, ಚಿರತೆ ದಾಳಿ ತಡೆಗಟ್ಟುವಂತೆ ಎಷ್ಟೇ ಮನವಿ ಮಾಡಿದರು ಸ್ಪಂದಿಸದ ಅರಣ್ಯ ಇಲಾಖೆ ವಿರುದ್ಧ ರೈತರು ಅಸಮಾಧಾನ ಹೊರಹಾಕಿದ್ದಾರೆ.

Exit mobile version