Site icon PowerTV

ಅದ್ಧೂರಿಯಾಗಿ ನೆರವೇರಿದ ಚಾಮುಂಡೇಶ್ವರಿ ಮಹಾರಥೋತ್ಸವ 

ಮೈಸೂರು : ಚಾಮುಂಡಿ ಬೆಟ್ಟದಲ್ಲಿ ಶ್ರೀ ಚಾಮುಂಡೇಶ್ವರಿ ಮಹಾರಥೋತ್ಸವ ಅದ್ಧೂರಿಯಾಗಿ ನೆರವೇರಿತು. ಮಹಾರಥೋತ್ಸವಕ್ಕೆ ರಾಜವಂಶಸ್ಥ ಯದುವೀರ್​ ಕೃಷ್ಣದತ್ತ ಚಾಮರಾಜ ಒಡೆಯರ್ ಚಾಲನೆ ನೀಡಿದರು.

ಸಾವಿರಾರು ಭಕ್ತರು ಸಮ್ಮುಖದಲ್ಲಿ ಬೆಳಿಗ್ಗೆ 7.50 ರಿಂದ 8.10ರೊಳಗೆ ಸಲ್ಲುವ ಶುಭ ಲಗ್ನದಲ್ಲಿ ಚಾಮುಂಡಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ನವರಾತ್ರಿ ಮುಗಿದ ಮೊದಲ ಹುಣ್ಣಿಮೆಯಲ್ಲಿ ಚಾಮುಂಡಿ ತಾಯಿಯ ರಥೋತ್ಸವ ನಡೆಸಲಾಗುತ್ತದೆ. ನವರಾತ್ರಿಯಂದು ಭಕ್ತರಿಗೆ ಶ್ರೀ ತಾಯಿಯ ದರ್ಶನ ಸಿಗಲೆಂದು ರಾಜವಂಶಸ್ಥರು ಈ ಮಹಾರಥೋತ್ಸವನ್ನು ಪ್ರಾರಂಭಿಸಿದರು.

ಕಲಾತಂಡಗಳು ಚಾಮುಂಡೇಶ್ವರಿ ದೇವಾಲಯದ ಸುತ್ತ ಒಂದು ಸುತ್ತು ಪ್ರದಕ್ಷಿಣೆ ಹಾಕಿ ರಥೋತ್ಸವಕ್ಕೆ ಮೆರುಗು ನೀಡಿದವು. ಸಿಎಆರ್ ಸಿಬ್ಬಂದಿ ಕುಶಾಲತೋಪ ಸಿಡಿಸಿ ಗೌರವ ಸಲ್ಲಿಸಿದರು.

Exit mobile version