Site icon PowerTV

ಗುಜರಾತ್‌ನಲ್ಲಿ ಕೇಜ್ರಿವಾಲ್‌ ಪೋಸ್ಟರ್‌ ವಾರ್‌

ನವದೆಹಲಿ :  ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮುಸ್ಲಿಂ ಟೋಪಿ ಧರಿಸಿರುವ ಹಾಗೂ ಅವರು ‘ಹಿಂದೂ ವಿರೋಧಿ’ ಎಂದು ಬಿಂಬಿಸುವ ಬ್ಯಾನರ್‌ಗಳು ಗುಜರಾತ್‌ನ ಹಲವು ಪ್ರಮುಖ ನಗರಗಳಲ್ಲಿ ಕಾಣಿಸಿಕೊಂಡಿವೆ.

ಕೇಜ್ರಿವಾಲ್ ವಿಧಾನಸಭಾ ಚುನಾವಣೆ ಹಿನ್ನಲೆ ಚುನಾವಣಾ ಪ್ರಚಾರಕ್ಕಾಗಿ ಗುಜರಾತ್ ಗೆ ಆಗಮಿಸುತ್ತಿದ್ದು ಇದರ ಮಧ್ಯೆ ‘ನಾನು ಹಿಂದೂ ಧರ್ಮದವನ್ನು ಹುಚ್ಚುತನವೆಂದು ಪರಿಗಣಿಸುತ್ತೇನೆ ಎಂದು ಬರೆದಿರುವ ಹಾಗೂ ಮುಸ್ಲಿಂ ಕ್ಯಾಪ್ ಧರಿಸಿರುವ ಬ್ಯಾನರ್ ಗಳು ಕಾಣಸಿಗುತ್ತಿದೆ. ಇನ್ನು ಕೆಲವಡೆ ‘ಹಿಂದೂ ವಿರೋಧಿ ಕೇಜ್ರಿವಾಲ್ ಗೋ ಬ್ಯಾಕ್’ ಎಂದು ಬರೆದಿರುವ ಬ್ಯಾನರ್​​ಗಳು ಪ್ರತ್ಯಕ್ಷವಾಗಿದೆ.

ಇನ್ನು, ಈ ಬ್ಯಾನರ್‌ಗಳು ಅಹಮದಾಬಾದ್, ರಾಜ್‌ಕೋಟ್, ಸೂರತ್ ಮತ್ತು ವಡೋದರಾ ನಗರಗಳಲ್ಲಿ ಕಟ್ಟಲಾಗಿದೆ. ಆಮ್ ಆದ್ಮಿ ಪಕ್ಷದ ದೆಹಲಿ ಸಚಿವ ರಾಜೇಂದ್ರ ಪಾಲ್ ಗೌತಮ್ ಧಾರ್ಮಿಕ ಮತಾಂತರ ಕಾರ್ಯಕ್ರಮದಲ್ಲಿ ಹಿಂದೂ ದೇವತೆಗಳನ್ನು ನಿರಾಕರಿಸುವ ಪ್ರಮಾಣ ವಚನ ಸ್ವೀಕರಿಸುತ್ತಿರುವ ವಿಡಿಯೋ ವೈರಲ್ ಬಳಿಕ ಈ ಘಟನೆ ನಡೆದಿದೆ.

ಎಎಪಿ ಮತ್ತು ಕೇಜ್ರಿವಾಲ್ ಅವರನ್ನು ಟೀಕಿಸುವ ಪೋಸ್ಟರ್‌ಗಳನ್ನು ರಾಜ್‌ಕೋಟ್‌ನಲ್ಲಿ ಪಕ್ಷದ ಸದಸ್ಯರು ಕಿತ್ತುಹಾಕಿದ್ದಾರೆ. ದೆಹಲಿ ಮುಖ್ಯಮಂತ್ರಿ ಮತ್ತು ಪಂಜಾಬ್ ಸಿಎಂ ಭಗವಂತ್ ಮಾನ್ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದ ದಾಹೋದ್ ನಗರದಲ್ಲಿ ‘ಹಿಂದೂ ವಿರೋಧಿ ಕೇಜ್ರಿವಾಲ್ ಗೋ ಬ್ಯಾಕ್’ ಎಂಬ ಬ್ಯಾನರ್‌ಗಳು ಕಂಡುಬಂದಿವೆ.

Exit mobile version