Site icon PowerTV

ದುಬೈನಿಂದ ಜಯರಾಜ್ ಸ್ಟೈಲ್​​ನಲ್ಲಿ ಏರ್​ಪೋರ್ಟ್​​​ಗೆ ‌ಬಂದಿಳಿದ ಡಾಲಿ ಧನಂಜಯ್​.!

ದೇವನಹಳ್ಳಿ; ‘ಹೆಡ್ ಬುಷ್’ದಲ್ಲಿ ನಟಿಸಿದಂತೆ ರೆಟ್ರೋ ಸ್ಟೈಲ್ ನಲ್ಲಿ ದುಬೈಗೆ ಹಾರಿದ್ದ ನಟ ಡಾಲಿ ಧನಂಜಯ್​ ಇಂದು ದೇವನಹಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿ ಅಂಬಾಸಿಡರ್ ಕಾರಿನಲ್ಲಿ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದರು.

‘ಹೆಡ್ ಬುಷ್’ ಸಿನಿಮಾದಲ್ಲಿ ನಟ ಡಾಲಿ ಅಭಿನಯಿಸಿ, ನಿರ್ಮಿಸಿದ್ದಾರೆ. ದುಬೈನಿಂದ ಕೆಐಎಎಲ್ ಗೆ ಇಂದು ಆಗಮಿಸಿದ ಡಾಲಿ ಧನಂಜಯ್, ಬೆಲ್ ಬಾಟಂ ಡ್ರೆಸ್ ನಲ್ಲಿ ದುಬೈಯಿಂದ ಏರ್ಪೋರ್ಟ್ ಗೆ ಆಗಮಿಸಿ, ಡಾನ್​ ಜಯರಾಜ್ ಸ್ಟೈಲ್​ನಲ್ಲಿ ನೆರೆದಿದ್ದ ‌ಅಭಿಮಾನಿಗಳತ್ತ ಡಾಲಿ ಕೈ‌ ಬೀಸಿದರು.

ಈ ಸಿನಿಮಾದಲ್ಲಿ ನಟ ಡಾಲಿ ಧನಂಜಯ್​ ಬೆಂಗಳೂರಿನ ಡಾನ್​ ಜಯರಾಜ್​ ಅವರ ಪಾತ್ರ ತುಂಬಿದ್ದಾರೆ. ಜಯರಾಜ್ ಆಗಿ ಪ್ರೇಕ್ಷಕರ ಮುಂದೆ ರೆಟ್ರೋ ಸ್ಟೈಲ್ ನಲ್ಲಿ ಎಂಟ್ರಿಕೊಡಲಿದ್ದಾರೆ. ಈ ಸಿನಿಮಾದಲ್ಲಿ ದೊಡ್ಡ ತಾರಾ ಬಳಗವೇ ಇದ್ದು, ನಟ ಲೂಸ್ ಮಾದ ಯೋಗಿ, ಬಾಲು ನಾಗೇಂದ್ರ ಕೂಡ ನಟಿಸಿದ್ದಾರೆ. ಅಗ್ನಿ ಶ್ರೀಧರ್ ಕತೆ ಹಣೆದಿದ್ದಾರೆ.

ಈ ಹಿಂದೆ ಟಗರು ಸಿನಿಮಾ ಮೂಲಕ ನಟ ರಾಕ್ಷಸ ಎಂದು ಬಿರುದು ಪಡೆದುಕೊಂಡಿದ್ದ ಧನಂಜಯ್ ಈ ಸಿನಿಮಾ ಮೂಲಕ ಅಭಿಮಾನಿಗಳಿಂದ ಪದ ರಾಕ್ಷಸ ಎಂದು ಕರೆಸಿಕೊಳ್ಳುತ್ತಾರೆ ಎಂದು ಸಿನಿಮಾ ಮಂದಿ ಹೇಳುತ್ತಿದ್ದಾರೆ. ಡಾಲಿ ಪಿಚ್ಚರ್ ಅಡಿಯಲ್ಲಿ ಚಿತ್ರ ನಿರ್ಮಾಣ ಆಗಿದೆ.

Exit mobile version