Site icon PowerTV

ಮೀಸಲಾತಿ ಹೆಚ್ಚಳದ ಬಗ್ಗೆ ಸಿಎಂ ನಿರ್ಧಾರ : ಸಿ.ಟಿ. ರವಿ

ಬೆಂಗಳೂರು : ST ಮೀಸಲಾತಿ ಪ್ರಮಾಣ ಹೆಚ್ಚಳ ಕುರಿತಾಗಿ ಅಕ್ಟೋಬರ್ 9ರ ಒಳಗಾಗಿ ಸಿಎಂ ಬಸವರಾಜ ಬೊಮ್ಮಾಯಿ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದ್ದಾರೆ.

ಇಂದು ನಡೆದ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಸರ್ವಾನುಮತದಿಂದ ಈ ಬಗ್ಗೆ ಸಿಎಂಗೆ ಆಗ್ರಹ ಮಾಡಲಾಗಿದೆ ಎಂದರು. ಕೋರ್ ಕಮಿಟಿ ಸಭೆಯ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೀಸಲಾತಿ ಪ್ರಮಾಣ ಏರಿಕೆ ಬಗ್ಗೆ ಕೋರ್ ಕಮಿಟಿ ಸಭೆ ಸರ್ವಾನುಮತದಿಂದ ಸಿಎಂಗೆ ಆಗ್ರಹಿಸಲಾಗಿದೆ. ಅಕ್ಟೋಬರ್ 9ರ ವಾಲ್ಮೀಕಿ ಜಯಂತಿಯ ಒಳಗಾಗಿ ST ಸಮುದಾಯದ ಮೀಸಲಾತಿ ಹೆಚ್ಚಳ ಬೇಡಿಕೆ ಪುರಸ್ಕಾರ ಮಾಡಿ‌ ST ಸಮುದಾಯದ ಮೀಸಲಾತಿ ಹೆಚ್ಚಳಕ್ಕೆ ಕೋರ್ ಕಮಿಟಿ ಆಗ್ರಹಿಸಿದೆ ಎಂದು ತಿಳಿಸಿದರು.

ಅದಲ್ಲದೇ, ಬಿಜೆಪಿ ಹಿಂದಿನಿಂದಲೂ SC, ST ಸಮುದಾಯದ ಹಿತ ಚಿಂತನೆ ಮಾಡುತ್ತಾ ಬಂದಿದೆ. ಈ‌ ಹಿನ್ನೆಲೆಯಲ್ಲಿ ST ಮೀಸಲಾತಿ ಹೆಚ್ಚಳ ತೀರ್ಮಾನ ಮಾಡಲು ಆಗ್ರಹ ಮಾಡಲಾಗಿದೆ. SC ಮೀಸಲಾತಿ ಹೆಚ್ಚಳ ಸಂಬಂಧಿಸಿದಂತೆ ಸದಾಶಿವ ಆಯೋಗದ ವರದಿ ಆಧರಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.

Exit mobile version