Site icon PowerTV

ಟೀಕಾಕಾರರಿಗೆ ಇನ್‌ಸ್ಟಾಗ್ರಾಂ ಪೋಸ್ಟ್​​​ ಮೂಲಕ ತಿರುಗೇಟು ನೀಡಿದ ಬೂಮ್ರಾ.!

ಮುಂಬೈ: ಬೊಗಳುವ ನಾಯಿಗಳಿಗೆಲ್ಲಾ ಕಲ್ಲು ಹೊಡೆಯುತ್ತಾ ನಿಂತರೆ ನಾವು ನಿಜವಾಗಲೂ ಕ್ರಮಿಸಬೇಕಾದ ದಾರಿಯಲ್ಲಿ ಕ್ರಮಿಸುವುದಕ್ಕೆ ಸಾಧ್ಯವಾಗುವುದಿಲ್ಲ ಎಂದು ವೇಗಿ ಜಸ್ಪ್ರೀತ್ ಬುಮ್ರಾ ಅವರು ಮಾಡಿದ ಪೋಸ್ಟ್ ವೈರಲ್​ ಆಗಿದೆ.

ಬೆನ್ನು ನೋವಿನಿಂದ ಮುಂಬರುವ ಅ 16 ರಿಂದ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ-20 ವಿಶ್ವ ಕಪ್​ನಿಂದ ಹೊರಗುಳಿದಿರುವ ಜಸ್ಪ್ರೀತ್ ಬುಮ್ರಾ ಅವರ ವಿರುದ್ದ ಹಲವಾರು ಟೀಕೆಗಳು ಬಂದಿದ್ದವು. ಈ ಎಲ್ಲಾ ಟೀಕೆಗಳಿಗೆ ಅಸಮಾಧಾನ ವ್ಯಕ್ತಪಡಿಸಿರುವ ಬುಮ್ರಾ ಪರೋಕ್ಷವಾಗಿ ಟೀಕಾಕಾರರಿಗೆ ಇನ್‌ಸ್ಟಾಗ್ರಾಂ ಖಾತೆಯಲ್ಲಿ ತಿರುಗೇಟು ನೀಡಿದ್ದಾರೆ.

ಐಪಿಎಲ್ ಸಂದರ್ಭದಲ್ಲಿ ಕಂಡು ಬಾರದ ಗಾಯದ ಸಮಸ್ಯೆಗಳು ಇಂತಹ ಪ್ರಮುಖ ಪಂದ್ಯಗಳ ಸಂದರ್ಭದಲ್ಲಿಯೇ ಯಾಕೆ ಬರುತ್ತವೆ ಎಂದು ಹಲವರು ಬೂಮ್ರಾ ಅವರನ್ನ ಪ್ರಶ್ನಿಸಿದ್ದರು. ಇನ್ನು ಹೆಚ್ಚು ಹಣ ಸಿಗುವ ಪಂದ್ಯಗಳಿಗಷ್ಟೇ ಇವರೆಲ್ಲ ಪ್ರಾಮುಖ್ಯ ನೀಡುತ್ತಿದ್ದಾರೆ ಎಂದು ಟೀಕಿಸಿದ್ದರು.

ಈಗ ಇದಕ್ಕೆ ತಿರುಗೇಟು ನೀಡಿದ ಬೂಮ್ರಾ ಪೋಸ್ಟ್​ ಸದ್ಯ ವೈರಲ್ ಆಗಿದ್ದು, ಅಭಿಮಾನಿಗಳು ಬುಮ್ರಾ ನಡೆಯನ್ನು ಸ್ವಾಗತಿಸಿದ್ದಾರೆ.

 

Exit mobile version