Site icon PowerTV

ಎರಡೂವರೆ ದಿನ ಜಿಲ್ಲೆಯಲ್ಲಿ ಪಾದಯಾತ್ರೆ ನಡೆಯಲಿದೆ : ಪರಮೇಶ್ವರ್

ತುಮಕೂರು : ಕೆಂಕೆರೆಯ ಬಳಿ ಗಡಿ ಅಂತ್ಯಕ್ಕೆ ಜಿಲ್ಲೆಯಲ್ಲಿ ಭಾರತ ಜೋಡೋ ಯಾತ್ರೆ ಮುಕ್ತಾಯ ಆಗುತ್ತೆ ಎಂದು ತುಮಕೂರು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಾಜಿ ಡಿಸಿಎಂ ಪರಮೇಶ್ವರ್ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತ್ ಜೋಡೋ ಯಾತ್ರೆ, 3 ಸಾವಿರ ಕಿಲೋ ಮೀಟರ್ ಯಾತ್ರೆ, ಇದು ಪ್ರತಿದಿನ 20 ಕಿಮಿ ಪ್ರಯಾಣದ ಯಾತ್ರೆ. ಅಕ್ಟೋಬರ್‌ 7 ರಂದು ಆದಿಚುಂಚನಗಿರಿ‌ ಬಳಿ ವಾಸ್ತವ್ಯದ ಬಳಿಕ ತುಮಕೂರು ಜಿಲ್ಲೆಗೆ‌ ಆಗಮಿಸಲಿದ್ದು, ತುಮಕೂರು ಜಿಲ್ಲೆಗೆ ಇದೇ 8 ರಂದು‌ ಬೆಳಗ್ಗೆ 7 ಕ್ಕೆ ಯಾತ್ರೆ ಆಗಮನ ಆಗುತ್ತೆ ಎಂದರು.

ಇನ್ನು, ಭಾರತ್ ಜೋಡೊ ಹಿನ್ನೆಲೆ ತುಮಕೂರು ಜಿಲ್ಲಾ ಕಾಂಗ್ರೆಸ್ ಸಕಲ ಸಿದ್ಧತೆ ಮಾಡಿಕೊಂಡಿದೆ. ಪ್ರತಿದಿನ ಕನಿಷ್ಠ 25 ಸಾವಿರ ಕಾರ್ಯಕರ್ತರು ಹೆಜ್ಜೆ ಹಾಕಲಿದ್ದಾರೆ. ಪಾದಯಾತ್ರಿಕರಿಗೆ ಉಪಹಾರ, ಊಟ ಹಾಗೂ ರಾತ್ರಿ ವೇಳೆ ವಾಸ್ತವ್ಯದ ವ್ಯವಸ್ಥೆ ಇರಲಿದೆ. 8 ರ ಬೆಳಗ್ಗೆ 6.30 ಕ್ಕೆ ಧ್ವಜಾರೋಹಣ ಬಳಿಕ ಸರಿಯಾಗಿ 7 ಗಂಟೆಗೆ ಯಾತ್ರೆ ಆರಂಭಗೊಳ್ಳಲಿದೆ. ಬೆಳಗ್ಗೆ ‌10 ಗಂಟೆ ವರೆಗೆ ಇರಲಿದೆ. ಬಳಿಕ 11 ಗಂಟೆಗೆ ಯಿಂದ ಮಧ್ಯಾಹ್ನ 3 ಗಂಟೆವರೆಗೆ ಯಾತ್ರೆ‌ ವೇಳೆ ನಿಗದಿತ ಜಾಗದಲ್ಲಿ ನಡೆಯುತ್ತೆ ಎಂದು ಹೇಳಿದರು.

ಅದಲ್ಲದೆ, ತುರುವೇಕೆರೆಯಲ್ಲಿ ತೆಂಗು ಬೆಳಗಾರರೊಂದಿಗೆ ಸಂವಾದ ನಡೆಯಲಿದೆ. ಕೆಬಿ ಕ್ರಾಸ್ ಬಳಿಕ ಕಾಡೇನಹಳ್ಳಿ‌ಯಲ್ಲಿ ಒಂದು‌ ಸಂವಾದ ಇರಲಿದೆ. ಬಿಡಿ ಕಾರ್ಮಿಕರು, ಬಂಜಾರ ಸಮುದಾಯದ ಸಮಸ್ಯೆ ಬಗ್ಗೆ‌ ಚರ್ಚೆ ಇರಲಿದೆ. ಇನ್ನೂ ಕೆಲ ಸಂವಾದಗಳು ಅಂತಿಮವಾಗಿಲ್ಲ. ಚಿಕ್ಕನಾಯಕನಹಳ್ಳಿ 9 ರಂದು‌ ವಾಲ್ಮೀಕಿ ಜಯಂತಿ ಹಿನ್ನೆಲೆ ಗೌರವ ಸಮರ್ಪಣೆ ಕಾರ್ಯಕ್ರಮ ನಡೆಯಲಿದೆ. ಕೊನೆ ಹಂತದಲ್ಲಿ ಸಣ್ಣಪುಟ್ಟ ಬದಲಾವಣೆ ಇರಲಿದೆ ಎಂದರು.

Exit mobile version