Site icon PowerTV

ಆನೆ ಮರಿಗೆ ಗಂಭೀರ ಗಾಯ; ಸಿಎಂಗೆ ಪತ್ರ ಬರೆದು ಮರುಗಿದ ರಾಹುಲ್ ಗಾಂಧಿ.!

ಬೆಂಗಳೂರು: ಗಾಯಗೊಂಡಿರುವ ಆನೆ ಮರಿಯೊಂದಕ್ಕೆ ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ ಮರುಕ ವ್ಯಕ್ತಪಡಿಸಿದ್ದಾರೆ.

​ನಾಗರಹೊಳೆ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಸಫಾರಿಗೆ ತೆರಳಿದ್ದ ವೇಳೆ ಗಾಯಗೊಂಡ ಆನೆ ಮರಿ ಕಂಡು ರಾಹುಲ್ ಗಾಂಧಿ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದು ಸರಿಯಾದ ಚಿಕಿತ್ಸೆ ನೀಡುವಂತೆ ಮನವಿ ಮಾಡಿದ್ದಾರೆ.

ದಸರಾ ಹಿನ್ನಲೆಯಲ್ಲಿ ಎರಡು ದಿನ ಭಾರತ್‌ ಜೋಡೋ ಬಿಡುವ ಪಡೆದುಕೊಂಡಿದ್ದ ರಾಹುಲ್ ಗಾಂಧಿ ಅವರು ತಮ್ಮ ತಾಯಿ ಸೋನಿಯಾ ಗಾಂಧಿಯೊಂದಿಗೆ ನಾಗರಹೊಳೆ ಅರಣ್ಯ ಪ್ರದೇಶಕ್ಕೆ ತೆರಳಿದ್ದರು. ಇಂದು ಮತ್ತೆ ಯಾತ್ರೆ ಆರಂಭವಾಗಿದ್ದು ಸೋನಿಯಾ ಗಾಂಧಿ ಸಾಥ್​ ನೀಡಿದ್ದಾರೆ.

ಆನೆ ಮರಿ ತೀವ್ರವಾಗಿ ಗಾಯಗೊಂಡಿರುವುದನ್ನು ನರಳಾಡುತ್ತಿದ್ದನ್ನ ಕಂಡ ರಾಹುಲ್​, ಈ ಕುರಿತು ಮುಖ್ಯಮಂತ್ರಿಗೆ ಬುಧವಾರ ಪತ್ರ ಬರೆದು ಮಾಹಿತಿ ನೀಡಿದ್ದಾರೆ.

Exit mobile version