Site icon PowerTV

ಶಿವಮೊಗ್ಗದಲ್ಲಿ ಭೂಮಿ ಕಂಪಿಸಿದ ಅನುಭವ.!

ಶಿವಮೊಗ್ಗ: ಇಂದು ಬೆಳಗಿನ ಜಾವ ಜಿಲ್ಲೆಯ ಶಿರಾಳಕೊಪ್ಪ ಪಟ್ಟಣದ ಬಳಿ ಭೂಮಿ ಕಂಪಿಸಿದ ಅನುಭವ ಆಗಿದೆ.

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದ ಶಿರಾಳಕೊಪ್ಪ ಪಟ್ಟಣದಲ್ಲಿ ಇಂದು ಬೆಳಗಿನ ಜಾವ 3.35 ಕ್ಕೆ ಭೂಮಿ ಕಂಪಿಸಿದ ಅನುಭವ ಆಗಿದೆ ಎಂದು ಜನರು ಹೇಳುತ್ತಿದ್ದಾರೆ. ಭೂಕಫನ 4.1 ತೀವ್ರತೆಯ ದಾಖಲಾಗಿದೆ.

ಎಲ್ಲರೂ ನಿದ್ರೆಗೆ ಜಾರಿದ್ದ ವೇಳೆ ಒಮ್ಮಿಂದೊಮ್ಮೆ ಭಾರಿ ಶಬ್ಧವಾಗಿದೆ. ಇದರಿಂದ ಜನರು ಬೆದರಿದ್ದಾರೆ. ಶಿರಾಳಕೊಪ್ಪದಿಂದ 3 ಕಿಮೀ ದೂರದಲ್ಲಿ ಭೂಕಂಪನದ ಅನುಭವವಾಗಿದೆ.

ಇನ್ನು ಭೂಮಿ ಕಂಪನಕ್ಕೆ ಅದೃಷ್ಟವಶಾತ್ ಯಾವುದೇ ಸಾವು ನೋವು ವರದಿಯಾಗಿಲ್ಲ. ಭೂಮಿ ಕಂಪನದ ಬಗ್ಗೆ ಜಿಲ್ಲಾಡಳಿತ ಸ್ಪಷ್ಟನೆ ನೀಡಬೇಕಿದೆ.

Exit mobile version