Site icon PowerTV

‘ಭಾರತ್​​ ಜೋಡೋ ಅಲ್ಲ, ಭಾರತ್​​​ ತೋಡೋ ಯಾತ್ರೆ : ಬಸವನಗೌಡ ಪಾಟೀಲ್

ವಿಜಯಪುರ : ಕಾಂಗ್ರೆಸ್ಸಿನವರು ನಡೆಸುತ್ತಿರೋದು ಭಾರತ್ ಜೋಡೋ ಯಾತ್ರೆಯಲ್ಲ. ಭಾರತ ತೋಡೋ ಯಾತ್ರೆ. ಭಾರತ ಜೋಡೊ ಯಾತ್ರೆ ಮಾಡುವ ನೈತಿಕತೆ ಕಾಂಗ್ರೆಸ್ಸಿಗೆ ಇಲ್ಲ ಎಂದು ವಿಜಯಪುರದಲ್ಲಿ BJP ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಪ್ರತಿಕ್ರಿಯೆ ನೀಡಿದ್ದಾರೆ.

ಪ್ರಿಯಾಂಕಾ ಖರ್ಗೆಯೇ ಹೇಳಿದ್ದಾರೆ. ಇದು ಭಾರತ ತೋಡೋ ಯಾತ್ರೆ ಎಂದು. ಹಿಂದೆ ದೇಶವನ್ನ ಒಡೆದವರು ಈಗ ಜೋಡೋ ಮಾಡುತ್ತಿದ್ದಾರೆ. ಮಾಜಿ ಪ್ರಧಾನಿ ಜವಾಹರ್​​​ಲಾಲ್​​​ ನೆಹರು ಸ್ವಾರ್ಥಕ್ಕಾಗಿ ಮಹಾತ್ಮಾ ಗಾಂಧಿ ಮಹಾ ತಪ್ಪು ಮಾಡಿದರು. ನೆಹರುರನ್ನು ಪ್ರಧಾನಿಯಾಗಿಸಲು ಭಾರತ ಒಡೆದರು. ಈಗ ಹೇಗೆ ಜೋಡೋ ಆಗುತ್ತದೆ ಎಂದು ಯತ್ನಾಳ್ ಪ್ರಶ್ನೆ ಮಾಡಿದರು.

ಭಾರತ ಜೋಡೋ ಮಾಡಿದ್ದು ಮೊದಲು ಪ್ರಧಾನಿ‌ ನರೇಂದ್ರ ಮೋದಿ, ಪ್ರಧಾನಿ ಮೋದಿ 370 ವಿಧಿ ತೆಗದರು, ಸರ್ಜಿಕಲ್ ಸ್ಟ್ರೈಕ್ ಮಾಡಿದರು ಎಂದು ಹೇಳಿದ ಯತ್ನಾಳ್​​​​​, ಕೆಲವೇ ದಿನಗಳಲ್ಲಿ POK ಭಾರತದ ಅವಿಭಾಜ್ಯ ಅಂಗವಾಗಲಿದೆ. ಈ ಮೂಲಕ ಮೋದಿ ಭಾರತ ಜೋಡಿಸುತ್ತಿದ್ದಾರೆ ಎಂದು ಅವರು ಹೇಳಿದರು.

Exit mobile version