Site icon PowerTV

ಮಗಳು ಅನ್ಯಜಾತಿಯ ಯುವಕನೊಂದಿಗೆ ಪರಾರಿ; ಮನನೊಂದು ತಂದೆ, ತಾಯಿ, ತಮ್ಮ ಆತ್ಮಹತ್ಯೆ.!

ಚಿಕ್ಕಬಳ್ಳಾಪುರ; ಅನ್ಯ ಜಾತಿಯ ಯುವಕನೊಂದಿಗೆ ಮಗಳು ಪರಾರಿಯಾದ ಹಿನ್ನಲೆಯಲ್ಲಿ ಮರ್ಯಾದೆಗೆ ಅಂಜಿ ಮೂವರು ಆತ್ಮಹತ್ಯೆ ಮಾಡಿಕೊಂಡ ಘಟನೆ ಶಿಡ್ಲಘಟ್ಟದ ಹಂಡಿಗನಾಳ ಗ್ರಾಮದಲ್ಲಿ ನಡೆದಿದೆ.

ತಾಯಿ ಸರೋಜಮ್ಮ, ತಂದೆ ಶ್ರೀರಾಮಪ್ಪ, ತಮ್ಮ ಮನೋಜ್ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಗಳು, ತಮ್ಮ ಮಗಳು 28 ವರ್ಷದ ಅರ್ಚನಾ ಅನ್ಯ ಜಾತಿಯ ನಾರಾಯಣಸ್ವಾಮಿ ಎಂಬಾತನ ಜೊತೆ ಪರಾರಿಯಾಗಿದ್ದಾಳೆ.

ಈ ಹಿನ್ನೆಲೆಯಲ್ಲಿ ಮಗಳು ಬೇರೆ ಜಾತಿಯ ಯುವಕನೊಂದಿಗೆ ಪರಾರಿಯಾಗಿದ್ದಾನೆ ಎಂದು ಮರ್ಯಾದೆಗೆ ಅಂಜಿ ಮನಸ್ಸಿಗೆ ಹಚ್ಚಿಕೊಂಡ ತಂದೆ, ತಾಯಿ, ತಮ್ಮ ಸೇರಿ ತಮ್ಮ ಮನೆಯಲ್ಲಿಯೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸದ್ಯ ಸ್ಥಳಕ್ಕೆ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

Exit mobile version