Site icon PowerTV

ಶಿವಮೊಗ್ಗದಲ್ಲಿ ಸಡಗರ ಸಂಭ್ರಮದ ಆಯುಧ ಪೂಜೆ

ಶಿವಮೊಗ್ಗ: ರಾಜ್ಯಾದ್ಯಂತ ನಾಡಹಬ್ಬ ದಸರಾ ಆಯುಧಪೂಜೆ ಹಬ್ಬ ಹಿನ್ನೆಲೆ, ಶಿವಮೊಗ್ಗದಲ್ಲಿ ಸಡಗರ ಸಂಭ್ರಮದ ಆಯುಧ ಪೂಜೆಯನ್ನು ಆಚರಿಸಲಾಗಿದೆ. ಎಲ್ಲೆಡೆ ಆಯುಧಪೂಜಾ ಕೈಂಕರ್ಯ ನಡೆಯಿತು. ಶಿವಮೊಗ್ಗದ ಡಿಎಆರ್ ನಲ್ಲೂ ಆಯುಧಪೂಜೆಯ ಪೊಲೀಸರು ನೆರವೇರಿಸಿದರು.

ಬಂದೂಕು, ರಿವಾಲ್ವರ್, ಆಯುಧಗಳಿಗೆ ಪೊಲೀಸರು ಪೂಜೆ ನೆರವೇರಿಸಿದರು. ಪೊಲೀಸ್ ವಾಹನಗಳಿಗೆ ಅಲಂಕಾರ ಮಾಡಿ ಪೂಜೆ ಸಲ್ಲಿಸಲಾಯ್ತು.ಡಿ.ಎ.ಆರ್. ಆರ್ಮ್ ಸ್ಟೋರ್ ನಲ್ಲಿ ಪೂಜೆಯನ್ನು ನೆರವೇರಿಸಿದರು. ಪೊಲೀಸ್ ಸಿಬ್ಬಂದಿ ನೆರದವರಿಗೆ ಸಿಹಿ ಹಂಚಿದರು. ಆಟೋ ಚಾಲಕರು ಕೂಡ ಆಟೋಗಳಿಗೆ ಅಲಂಕರಿಸಿ ಆಯುಧ ಪೂಜೆ ನೆರವೇರಿಸಿದರು. ಬಾಲರಾಜ್ ಅರಸ್ ರಸ್ತೆಯ ಆಟೋ ನಿಲ್ದಾಣದಲ್ಲಿ ಆಯುಧ ಪೂಜೆ ನೆರವೇರಿತು.

Exit mobile version