Site icon PowerTV

ಕನ್ಹಯ್ಯಾಲಾಲ್ ಹತ್ಯೆ ಕೇಸ್​ನ ಪ್ರಮುಖ ಸಾಕ್ಷಿಯಾಗಿದ್ದ ರಾಜ್​ಕುಮಾರ್​ ಆರೋಗ್ಯ ಗಂಭೀರ

ರಾಜಸ್ಥಾನ: ಉದಯಪುರದಲ್ಲಿ ಕನ್ಹಯ್ಯಾಲಾಲ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಸಾಕ್ಷಿಯಾಗಿದ್ದ ರಾಜ್‌ಕುಮಾರ್ ಶರ್ಮಾ (50) ಮಿದುಳು ರಕ್ತಸ್ರಾವಕ್ಕೆ ಒಳಗಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಸದ್ಯ ರಾಜ್​ಕುಮಾರ್​ ಅವರ ಆರೋಗ್ಯ ಚಿಂತಾಜನಕ ಸ್ಥಿತಿಯಲ್ಲಿದ್ದು, ಅವರ ಚಿಕಿತ್ಸೆಗಾಗಿ ಎಸ್‌ಎಂಎಸ್ ಆಸ್ಪತ್ರೆ ಜೈಪುರದ ವಿಶೇಷ ವೈದ್ಯರ ತಂಡವನ್ನು ಕರೆಸಲಾಯಿತು.

ಈ ಬಗ್ಗೆ ಮಾತನಾಡಿದ ಎಸ್‌ಎಂಎಸ್ ಆಸ್ಪತ್ರೆಯ ವೈದ್ಯ ಡಾ ರಾಜೀವ್ ಬಗರಹಟ್ಟ, ರೋಗಿಯ ಸ್ಥಿತಿ ಗಂಭೀರವಾಗಿದೆ ಎಂದು ನಮಗೆ ಮಾಹಿತಿ ಬಂದಿದೆ. ಆದ್ದರಿಂದ ಯಾವುದೇ ರೀತಿಯ ವಿಳಂಬವನ್ನು ಮಾಡದೆ ವೈದ್ಯರ ತಂಡ ಸತತ ಪ್ರಯತ್ನ ಮಾಡುತ್ತಿದೆ. ಇನ್ನು ರಾಜ್‌ಕುಮಾರ್ ಅವರು ದೇಹ ಸ್ಪಂದಿಸುತ್ತಿದ್ದು, ಅವರ ಕೈಗಳು ಕೆಲಸ ಮಾಡುವುದನ್ನು ನಿಲ್ಲಿಸಿವೆ ಎಂದು ಹೇಳಿದ್ದಾರೆ.

ಇನ್ನು ಈ ಸಂಬಂಧ ರಾಜಸ್ಥಾನದ ಕಂದಾಯ ಸಚಿವ ರಾಮ್‌ಲಾಲ್ ಜಾಟ್ ಅವರು ಆಸ್ಪತ್ರೆಗೆ ಭೇಟಿ ನೀಡಿ ರೋಗಿಯ ಕುಟುಂಬವನ್ನು ಭೇಟಿಯಾಗಿದ್ದಾರೆ. ಈ ವೇಳೆ ಜಿಲ್ಲಾಧಿಕಾರಿ ತಾರಾಚಂದ್ ಮೀನಾ ಕೂಡ ಆಸ್ಪತ್ರೆಗೆ ಆಗಮಿಸಿದರು. ಸದ್ಯ ರಾಜ್‌ಕುಮಾರ್ ಶರ್ಮಾ ಅವರನ್ನು ಬಿಗಿ ಭದ್ರತೆಯೊಂದಿಗೆ ಸೂಪರ್ ಸ್ಪೆಷಾಲಿಟಿ ವಿಂಗ್‌ನ ಐಸಿಯುಗೆ ದಾಖಲಿಸಲಾಗಿದೆ.

Exit mobile version