Site icon PowerTV

RSSನ್ನು ಏನೂ ಮಾಡಲು ಆಗುವುದಿಲ್ಲ : ಕೆ.ಎಸ್​ ಈಶ್ವರಪ್ಪ

ಶಿವಮೊಗ್ಗ: RSS ಚಡ್ಡಿಗಳೇ ಮತ್ತೆ ಬರುತ್ತೇವೆ ಎಂದು ಗೋಡೆಬರಹ ಬರೆದಿರುವ ವಿಚಾರಕ್ಕೆ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಪ್ರತಿಕ್ರಿಯೆ ನೀಡಿದ್ದಾರೆ.

ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ದೇಶದ್ರೋಹಿ ಪಿಎಫ್ಐ ಸಂಘಟನೆಯನ್ನು ನಿಷೇಧ ಮಾಡಿದೆ. ಅದಕ್ಕೆ ಕಾಂಗ್ರೆಸ್ ಮತ್ತು ದೇಶ ಭಕ್ತ ಮುಸ್ಲಿಂ ನಾಯಕರು ಬೆಂಬಲ ಕೊಡಬೇಕು. ಪಿಎಫ್ಐ ಕಾರ್ಯಕರ್ತರಿಗೆ ಮುಸಲ್ಮಾನ್ ಹಿರಿಯರು ಬುದ್ದಿ ಹೇಳಬೇಕಿದೆ.

ಪಿಎಫ್ಐ ಮರು ಜನ್ಮ ಮುಂತಾದ ರೋಡ್ ಮತ್ತು ಗೋಡೆ ಬರಹವನ್ನು ಹೇಡಿಗಳು ಮಾಡುತ್ತಾರೆ. ಮುಂದೆ ಬಂದು ಈ ರೀತಿ ಮಾಡಿದರೆ ಸರಿಯಾಗಿ ಸರ್ಕಾರ ಬುದ್ಧಿ ಕಲಿಸುತ್ತದೆ. RSS ಅನ್ನು ಯಾರಿಂದಲೂ ಏನೂ ಮಾಡಲು ಆಗುವುದಿಲ್ಲ. ಅವರ ಅಪ್ಪನಿಂದಲೂ ಬುದ್ಧಿ ಕಲಿಸಲು ಸಾಧ್ಯವಿಲ್ಲ. ಈ ರೀತಿ ಮತ್ತೆ ಸಂಘಟನೆಗಳು ಹುಟ್ಟಿಕೊಂಡರೆ, ಅವರ ಸೊಂಟ ಬೆನ್ನು ಮುರಿಯುವ ಶಕ್ತಿ ಕೇಂದ್ರ ಸರ್ಕಾರಕ್ಕೆ ಇದೆ ಎಂದು ವಾಗ್ದಾಳಿ ನಡೆಸಿದ್ದಾರೆ.

Exit mobile version