Site icon PowerTV

ದೇಶದಲ್ಲಿ ಎಲ್ಲಾ ಮುಸಲ್ಮಾನರು ದೇಶದ್ರೋಹಿಗಳಲ್ಲ : ಕೆ.ಎಸ್​ ಈಶ್ವರಪ್ಪ

ಕಲಬುರಗಿ : ಅ.30 ರಂದು ಕಲಬುರಗಿಯಲ್ಲಿ ರಾಜ್ಯಮಟ್ಟದ OBC ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಕಲಬುರಗಿಯಲ್ಲಿ ಮಾಜಿ ಸಚಿವ K.S. ಈಶ್ವರಪ್ಪ ಹೇಳಿದ್ರು. ಈಗಾಗಲೇ ಸಮಾವೇಶದ ಕುರಿತು ಪೂರ್ವಭಾವಿ ಸಭೆ ನಡೆಸಲಾಗ್ತಿದೆ. ಪ್ರತಿ ವಿಧಾನಸಭೆ ಕ್ಷೇತ್ರದಿಂದ ಪಕ್ಷದ ಮುಖಂಡರು ಭಾಗಿಯಾಗಲಿದ್ದಾರೆ. ಸಮಾವೇಶಕ್ಕೆ 5 ಲಕ್ಷಕ್ಕೂ ಅಧಿಕ ಜನ ಭಾಗಿಯಾಗುವ ನಿರೀಕ್ಷೆ ಇದೆ ಎಂದು ತಿಳಿಸಿದರು.

ಕಾಂಗ್ರೆಸ್​​​​ ನಾಯಕ ಮಲ್ಲಿಕಾರ್ಜುನ ಖರ್ಗೆರನ್ನ ಬಲಿ ಕೊಡುವುದಕ್ಕೆ AICC ಅಧ್ಯಕ್ಷ ಸ್ಥಾನದ ಅಖಾಡಕ್ಕೆ ಇಳಿಸಿದ್ದಾರೆ. ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಕಾಲಿಟ್ಟಲ್ಲಿ ಪಕ್ಷ ಧೂಳಿಪಟವಾಗ್ತಿದೆ. ಭಾರತ್ ಜೋಡೋ ಯಾಕೆ ಮಾಡಬೇಕು? ಪಾಕಿಸ್ತಾನ, ಹಿಂದೂಸ್ಥಾನ ವಿಭಜನೆ ಮಾಡಿದ್ದು ಯಾರು? ದೇಶದಲ್ಲಿ ಎಲ್ಲಾ ಮುಸಲ್ಮಾನರು ದೇಶದ್ರೋಹಿಗಳಲ್ಲ. ದೇಶದಲ್ಲಿ ನಡೆಯುವ ಗಲಭೆ, ದೊಂಬಿಗಳಿಗೆ ಕಾಂಗ್ರೆಸ್ ಕಾರಣ ಎಂದು ಕಾಂಗ್ರೆಸ್​​ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

RSSಗೆ ರಾಷ್ಟ್ರ ಭಕ್ತಿ ಬಿಟ್ಟು ಬೇರೆನು ಗೊತ್ತಿಲ್ಲ. ಆದ್ರೆ PFIಗೆ ರಾಷ್ಟ್ರದ್ರೋಹ ಬಿಟ್ಟು ಬೇರೆನು ಗೊತ್ತಿಲ್ಲ. ನನಗೆ ಸಚಿವ ಸ್ಥಾನ ನೀಡಿ ಅಂತಾ ಕೇಳಿಕೊಂಡಿಲ್ಲ. ಸಚಿವ ಸ್ಥಾನ ಕೊಡೋದು ಬಿಡೋದು ವರಿಷ್ಟರಿಗೆ ಬಿಟ್ಟಿದ್ದು. ನನಗೆ ಕ್ಲಿನ್‌ಚಿಟ್ ಸಿಕ್ಕನಂತರ ಸಿಎಂ ಬಸವರಾಜ್​​​ ಬೊಮ್ಮಾಯಿ‌, BSY, ಕಟೀಲ್ ಕಾಲ್ ಮಾಡಿ ಅಭಿನಂದಿಸಿದ್ರು ಎಂದು ತಿಳಿಸಿದರು.

Exit mobile version