Site icon PowerTV

ನನ್ನ ಕೇಸ್​​​ ತ್ವರಿತಗತಿಯಲ್ಲಿ ನಡೆಯುತ್ತಿಲ್ಲ : ಜನಾರ್ಧನರೆಡ್ಡಿ

ಬಳ್ಳಾರಿ : ಕಳೆದ 12 ವರ್ಷಗಳಿಂದ ನನ್ನ ಮೇಲಿನ ಅಕ್ರಮ ಗಣಿಗಾರಿಕೆ ಕೇಸ್ ಸುಪ್ರೀಂಕೋರ್ಟ್​​​​​​ನಲ್ಲಿದೆ. ಆದರೆ ತ್ವರಿತಗತಿಯಲ್ಲಿ ನನ್ನ ಕೇಸ್​​​ನ ತನಿಖೆ ನಡೆಯುತ್ತಿಲ್ಲ. ಕೇಸ್ ಬೇಗ ವಿಚಾರಣೆ ನಡೆಸುವಂತೆ ನಾನೇ ಅರ್ಜಿ ಸಲ್ಲಿಸುವೆ ಎಂದರು.

ಇನ್ನು, ಶೀಘ್ರವಾಗಿ ಕೇಸ್ ವಿಚಾರಣೆ ನಡೆಸಿದ್ರೆ, 3-4 ತಿಂಗಳಲ್ಲಿಯೇ ಪ್ರಕರಣ ಇತ್ಯರ್ಥವಾಗುತ್ತೆ ಎಂದು ಮಾಜಿ ಸಚಿವ ಜನಾರ್ಧನರೆಡ್ಡಿ ಹೇಳಿದ್ದಾರೆ. ಬಳ್ಳಾರಿಯಲ್ಲಿ ಮಾತನಾಡಿದ ಅವರು, ಕಳೆದ 12 ವರ್ಷದಿಂದ ತ್ವರಿತಗತಿಯಲ್ಲಿ ಕೇಸ್ ನಡೆಯುತ್ತಿಲ್ಲ, ಕಳೆದ 14 ತಿಂಗಳಿಂದ ಕುಟುಂಬದ ಜೊತೆ ಬಳ್ಳಾರಿಯಲ್ಲಿ ಇರುವೆ. ಕುಟುಂಬ ಹಾಗೂ ದೇವಸ್ಥಾನಗಳಿಗೆ ಮಾತ್ರ ಸೀಮಿತ ಭೇಟಿ ನೀಡ್ತಿದ್ದೇನೆ ಎಂದು ಹೇಳಿದರು.

ಅದಲ್ಲದೇ, ಸಾರ್ವಜನಿಕವಾಗಿ ನಾನು ಎಲ್ಲೂ ಬರುತ್ತಿಲ್ಲ. ಆದರೂ CBIನಿಂದ ನನಗೆ ಕಿರುಕುಳ ಆಗುತ್ತಿದೆ. CBIನವರು ನನಗೆ ಬಳ್ಳಾರಿಯಲ್ಲಿ ಇರಲು ಬಿಡುತ್ತಿಲ್ಲ ಎಂದು CBI ವಿರುದ್ಧ ಕಿಡಿಕಾರಿದ್ರು. ಜನಾರ್ಧನರೆಡ್ಡಿ ಮತ್ತೆ ರಾಜಕೀಯಕ್ಕೆ ಬರ್ತಾರ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ರಾಜಕೀಯ ವಿಚಾರದಲ್ಲಿ ಅತೀ‌ ಶೀಘ್ರದಲ್ಲಿಯೇ ತಾಯಿ ದಾರಿ ತೋರಿಸುತ್ತಾಳೆ. ನಾನು ಶೀಘ್ರದಲ್ಲಿ ನಿಮ್ಮೆ ಮುಂದೆ ಬರುತ್ತೇನೆ, ನೀವೇ ನೋಡುತ್ತೀರಿ ಎಂದರು.

Exit mobile version