Site icon PowerTV

ಮಹಿಳೆಯರೊಂದಿಗೆ ಭರ್ಜರಿ ಹೆಜ್ಜೆ ಹಾಕಿದ ಸಚಿವೆ ಶಶಿಕಲಾ ಜೊಲ್ಲೆ.!

ಬೆಳಗಾವಿ: ಜಿಲ್ಲೆಯ‌ ನಿಪ್ಪಾಣಿಯಲ್ಲಿ‌ ಹಜ್ ಮತ್ತು ವಕ್ಫ್ ಸಚಿವೆ ಶಶಿಕಲಾ ಜೊಲ್ಲೆ ಅವರು ದಾಂಡಿಯಾ ನೃತ್ಯದಲ್ಲಿ ಮಹಿಳೆಯರೊಂದಿಗೆ ಭರ್ಜರಿ ಹೆಜ್ಜೆ ಹಾಕಿ ಎಂಜಾಯ್​ ಮಾಡಿದ್ದಾರೆ.

ನಿಪ್ಪಾಣಿ ನಗರದ ಶಿವಶಂಕರ್ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ಆಯೋಜನೆ ಮಾಡಿದ್ದ ದಾಂಡಿಯಾ ಕಾರ್ಯಕ್ರಮದಲ್ಲಿ ನೂರಾರು ಮಹಿಳೆಯರು ಭಾಗವಹಿಸಿದ್ದರು. ಈ ವೇಳೆ ಮಹಿಳೆಯರೊಂದಿಗೆ ಪಾರಂಪರಿಕ ದಾಂಡಿಯಾ ಹಾಗೂ ಗರ್ಭಾ ನೃತ್ಯದಲ್ಲಿ ಸಚಿವೆ ಶಶಿಕಲಾ ಜೊಲ್ಲೆ ಡ್ಯಾನ್ಸ್​ ಮಾಡಿದ್ದಾರೆ.

ಸಚಿವೆ ಶಶಿಕಲಾ ಜೊಲ್ಲೆ ಕೂಡ ಮಹಿಳೆಯರ‌ ಜೊತೆ ನೃತ್ಯದಲ್ಲಿ ಬನಾಗವಹಿಸಿ ಕೆಲವೊಂದು ಸ್ಟೆಪ್ ಹಾಕಿದರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಜೊಲ್ಲೆ ದಸರಾ ಹಬ್ಬ ಪಾರಂಪರಿಕ ಹಬ್ಬ.‌ ಕೋವಿಡ್ ಆದ ಎರಡು ವರ್ಷದ ಬಳಿಕ ಉತ್ಸವಗಳಲ್ಲಿ ಜನರು ಭಾಗಿಯಾಗಿ ಆನಂದಿಸಿದ್ದಾರೆ ಎಂದರು.

Exit mobile version