Site icon PowerTV

ಮಳೆ ಲೆಕ್ಕಿಸದೇ ಅಬ್ಬರದ ಭಾಷಣ ಮಾಡಿದ ರಾಹುಲ್ ಗಾಂಧಿ.!

ಮೈಸೂರು: ಭಾರತ್ ಜೋಡೋ ಯಾತ್ರೆ ರಾಜ್ಯದಲ್ಲಿ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಮಳೆ ಲೆಕ್ಕಸಿದೇ ಕಾಂಗ್ರೆಸ್​ ಕಾರ್ಯಕರ್ತರನ್ನ ಉದ್ದೇಶಿಸಿ ಅಬ್ಬರದ ಭಾಷಣ ಮಾಡಿದ್ದಾರೆ.

ಭಾರತ್​ ಜೋಡೋ ಯಾತ್ರೆ ನಗರಕ್ಕೆ ಆಗಮಿಸುತ್ತಿದ್ದಂತೆ ಸಂಜೆಯಿಂದ ಮೈಸೂರಿನಲ್ಲಿ ಮಳೆ ಆರಂಭವಾಯಿತು. ಆದರೆ ರಾಹುಲ್ ಗಾಂಧಿ ಮಳೆ ಹೊರತಾಗಿ ಭಾಷಣ ಮಾಡಿರುವುದು ವಿಶೇಷವಾಗಿತ್ತು.

ಇದಕ್ಕೂ ಮೊದಲು ಕಾಂಗ್ರೆಸ್ ಪಕ್ಷದ ವತಿಯಿಂದ ನಡೆಸಲಾಗುತ್ತಿರುವ ಐಕ್ಯತಾ ಯಾತ್ರೆಯು ಬದನವಾಳುವಿನಲ್ಲಿ ಅತ್ಯಂತ ಅರ್ಥಪೂರ್ಣವಾಗಿ ಗಾಂಧಿ ಜಯಂತಿಯನ್ನು ರಾಹುಲ್ ಆಚರಿಸಿದರು.

ರಾಹುಲ್ ಗಾಂಧಿ ಅವರು ಖಾದಿ ಗ್ರಾಮೋದ್ಯೋಗ ಕೇಂದ್ರಕ್ಕೆ ಭೇಟಿ ನೀಡಿ ಮಹಾತ್ಮ ಗಾಂಧೀಜಿ ಅವರ ಪ್ರತಿಮೆಗೆ ಪುಷ್ಪ ನಮನವನ್ನು ಸಲ್ಲಿಸಿ ಅಲ್ಲಿ ಕೆಲಸ ನಿರ್ವಹಿಸುತ್ತಿರುವ ಮಹಿಳೆಯರೊಟ್ಟಿಗೆ ಮಾತನಾಡಿ ಅವರ ಕಷ್ಟಗಳನ್ನು ಆಲಿಸಿದರು.

Exit mobile version