Site icon PowerTV

ಮಾರಕಾಸ್ತ್ರಗಳಿಂದ ಚುಚ್ಚಿ ಚುಚ್ಚಿ ಯುವಕನ ಬರ್ಬರ ಕೊಲೆ

ಚಿಕ್ಕಬಳ್ಳಾಪುರ : ಮಾರಕಾಸ್ತ್ರಗಳಿಂದ ಚುಚ್ಚಿ ಚುಚ್ಚಿ ಯುವಕನ ಬರ್ಬರ ಕೊಲೆ ಮಾಡಿದ ಘಟನೆ ಚಿಕ್ಕಬಳ್ಳಾಪುರ ತಾಲ್ಲೂಕು ರಾಷ್ಟ್ರೀಯ ಹೆದ್ದಾರಿ 44 ಹಾರೋಬಂಡೆ‌ ಬಳಿ ನಡೆದಿದೆ.

ದೊಡ್ಡಬಳ್ಳಾಪುರ ಮೂಲದ ನಂದನ್ ಕೊಲೆಯಾದ ದುರ್ದೈವಿ. ಚಿಕ್ಕಬಳ್ಳಾಪುರ ನಗರದ ಕೋಟೆಯಲ್ಲಿ ವಾಸವಾಗಿದ್ದ ನಂದನ್. ದರ್ಶನ್ ತಂಗಿ ಶಿರೀಷಾ (೧೬) ಜೊತೆ ಪ್ರೀತಿಯಲ್ಲಿದ್ದ, ತಂಗಿಯ ತಂಟೆಗೆ ಬರದಂತೆ ಹಲವು ಸಲ ವಾರ್ನಿಂಗ್ ಕೊಟ್ಟಿದ್ದಾನೆ.

ಇನ್ನು, ಇದರ ಮಧ್ಯೆ ಇನ್ಸ್ಟಾ ಗ್ರಾಂನಲ್ಲಿ ಶಿರೀಷಾ ಜೊತೆಯಲ್ಲಿರೋ ಪೋಟೋ ಹಂಚಿಕೊಂಡಿದ್ದ ನಂದನ್. ನಂದನ್ ವರ್ತನೆಗೆ ದರ್ಶನ್ ಕೆರಳಿ ಕೆಂಡವಾಗಿದ್ದ . ಪದೇ ಪದೇ ಹೇಳಿದರೂ ಬುದ್ದಿ ಕಲಿಯದ ನಂದನ್ ಕೊಲೆಗೆ ಸ್ಕೆಚ್ ಮಾಡಲಾಗಿದ್ದು, ಕಂಠಪೂರ್ತಿ ಕುಡಿಸಿ ಬಳಿಕ ದರ್ಶನ್ ಮತ್ತವನ ಸ್ನೇಹಿತ ಆಶ್ರಯ್ ಮಾರಕಾಸ್ತ್ರಗಳಿಂದ ಚುಚ್ಚಿ ಚುಚ್ಚಿ ಕೊಲೆ ಮಾಡಿದ್ದಾರೆ.ಸ್ಥಳಕ್ಕೆ‌ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸರ ಭೇಟಿ ಪರಿಶೀಲನೆ ನಡೆಸಿದ್ದು, ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version