Site icon PowerTV

ರಮೇಶ್ ಜಾರಕಿಹೊಳಿ, ಈಶ್ವರಪ್ಪ ಕಳಂಕ ರಹಿತರಾಗಿದ್ದಾರೆ : ಭೈರತಿ ಬಸವರಾಜ್

ದಾವಣಗೆರೆ : ಈಶ್ವರಪ್ಪ, ರಮೇಶ್ ಜಾರಹೊಳಿ ಅವರಿಗೆ ಸಚಿವ ಸ್ಥಾನ ನೀಡುವಂತೆ ಖಂಡಿತ ಒತ್ತಾಯ ಮಾಡುತ್ತೇನೆ ಎಂದು ದಾವಣಗೆರೆಯಲ್ಲಿ ಸಚಿವ ಭೈರತಿ ಬಸವರಾಜ್ ಹೇಳಿದರು.

RSS ಬ್ಯಾನ್ ಮಾಡಬೇಕು ಎಂಬ ಸಿದ್ದರಾಮಯ್ಯ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, RSS ಏನೂ ದ್ರೋಹ ಮಾಡಿದ ಕೆಲಸ ಮಾಡಿದೆ. RSS ದೇಶಭಕ್ತಿ ಸಂಸ್ಥೆ. ದೇಶದ ಬಗ್ಗೆ ಅಪಾರ ಕಾಳಜಿ ವಹಿಸುವುದನ್ನ ಸಹಿಸಲು ಆಗುತ್ತಿಲ್ಲ. ಇಲ್ಲಿ ಅನ್ನ ನೀರು ತಿಂದು ದ್ರೋಹ ಬಗೆಯುವ ಕೆಲಸ ಪಿಎಫ್ ಐ ಮಾಡಿದೆ. ಈ ಹಿನ್ನಲೆ ನಮ್ಮ ಕೆಚ್ಚೆದೆಯ ನಾಯಕರು ಪಿಎಫ್ ಐ ಬ್ಯಾನ್ ಮಾಡಿದ್ದಾರೆ ಎಂದರು.

ಇನ್ನು, ಪಾದಯಾತ್ರೆಗೆ ಹೆದರುವ ಪರಿಸ್ಥಿತಿ ಬಿಜೆಪಿಗೆ ಇಲ್ಲ. ಇಂತಹ ನೂರು ನಾಯಕರು ಬಂದರು, ಏನೂ ಮಾಡಲು ಸಾಧ್ಯ ಇಲ್ಲ. ಸಿದ್ದರಾಮೋತ್ಸವ ಬಂದವರೆಲ್ಲ ವೋಟ್ ಹಾಕುತ್ತಾರ. ಇದು ಅದೇ ಪರಿಸ್ಥಿತಿ. ಏನೇ ಆಗಲಿ ನಮ್ಮ ಪಕ್ಷ ಗೆದ್ದು ಅಧಿಕಾರ ಕ್ಕೆ ಬರುತ್ತದೆ ಎಂದು ಹೇಳಿದರು.

Exit mobile version