Site icon PowerTV

ಬೇರೆ ರಾಜ್ಯದಲ್ಲಿ ‘ಕಾಂತಾರ’ ಭರ್ಜರಿ ಪ್ರದರ್ಶನ, ಫ್ಯಾನ್​ ಇಂಡಿಯಾ ಅಂದ್ರೆ ಇದು.!

ಬೆಂಗಳೂರು: ಕಳೆದ ಶುಕ್ರವಾರ ತೆರೆ ಕಂಡ ಸಸ್ಪೆನ್ಸ್ ಥ್ರಿಲ್ಲರ್​ ‘ಕಾಂತಾರ’ ಸಿನಿಮಾ ಬಗ್ಗೆ ಬಹುತೇಕ ಪಾಸಿಟಿವ್ ರಿವ್ಯು ದೇಶ, ರಾಜ್ಯ ಸೇರಿದಂತೆ ವಿವಿಧ ಥೇಟರ್​ಗಳಲ್ಲಿ ಬಹುತೇಕವಾಗಿ ಕಾಂತಾರ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ.

ಹೌಸ್​ ಫುಲ್​ ಪ್ರರ್ಶನ ಹಿನ್ನಲೆಯಲ್ಲಿ ನಿರ್ದೇಶಕ, ನಟ ರಿಷಬ್​ ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬೇರೆ ಭಾಷೆಗಳ ಸಿನಿಮಾಗಳು ನಮ್ಮ ಕರ್ನಾಟಕದಲ್ಲಿ ನಾಲ್ಕು ಥೇಟರ್​ಗಳಲ್ಲಿ ಮಾತ್ರ ಕಾಣಿಸಿಕೊಂಡಿದೆ. ಅದೆ ನಮ್ಮ ಚಿತ್ರಗಳು ಬೇರೆ ರಾಜ್ಯಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ ಎಂದು ತಮ್ಮ ಸಿನಿಮಾ ಬಗ್ಗೆ ರಿಷಬ್​ ಮೆಚ್ಚುಗೆ ನುಡಿಗಳನ್ನು ಆಡಿದರು.

ಬೇರೆ ಭಾಷೆಯ ಡಬ್​ ಸಿನಿಮಾ ರಾಜ್ಯದಲ್ಲಿ ನಾಲ್ಕು ಪ್ರದರ್ಶನ ಕಂಡಿವೆ. ಅದೇ ಕಾಂತಾರ ಸಿನಿಮಾ ಚೆನ್ನೈನಲ್ಲಿ ಹಲವು ಶೋ ಗಳಲ್ಲಿ ಉತ್ತಮ ಆರಂಭ ಪಡೆದುಕೊಂಡಿದೆ. ಹೆಸರಿಗೆ ಮಾತ್ರ ಪ್ಯಾನ್ ಇಂಡಿಯಾ ಅಂದರೆ ಸಾಲದು ಅದಕ್ಕೆ ತಕ್ಕಂತೆ ಸಿನಿಮಾವನ್ನ ನೋಡುಗರಿಗೆ ನೀಡಬೇಕು ಎಂದರು.

ಇನ್ನು ಬೇರೆ ಭಾಷೆಯವರು ಕನ್ನಡದಲ್ಲಿ ಡಬ್ ಮಾಡಿ​ ಬಿಡುಗಡೆ ಮಾಡಿದ್ದಕ್ಕಿಂದ, ನಾವು ಕಾಂತಾರ ಸಿನಿಮಾವನ್ನ ಬೇರೆ ಭಾಷೆಯಲ್ಲಿ ಡಬ್​ ಮಾಡಿ ಅತೀ ಹೆಚ್ಚು ಥೇಟರ್​ಗಳಲ್ಲಿ ಪ್ರದರ್ಶನಗೊಂಡಿದೆ. ಚನ್ನೈಯಲ್ಲಿ ಕಾಂತಾರ ಹೌಸ್​ಫುಲ್ ಪ್ರದರ್ಶನ ಕಾಣುತ್ತಿದೆ, ಅಲ್ಲಿನ ಸಿನಿಮಾ ಪಂಡಿತರು ನಮಗೆ ಫೋನ್​ ಮಾಡಿ ಹೊಗಳುತ್ತಿದ್ದಾರೆ. ಕನ್ನಡದ ಸಿನಿಮಾ ವಿಶ್ವದ್ಯಾಂತ ಮುಟ್ಟೋದು ತುಂಬಾ ಮುಖ್ಯ ಆಗ ನಮ್ಮ ನಮ್ಮ ಹಾಗೂ ಸ್ಯಾಂಡಲ್​ವುಡ್​ ಹೆಸರು ಕೇಳಿಬರುತ್ತದೆ ಎಂದು ರಿಷಬ್​ ಶೆಟ್ಟಿ ಹೇಳಿದರು.

Exit mobile version