Site icon PowerTV

ಅಧಿಕಾರಿ ಮಂಜುಳಾ ವಿರುದ್ಧ ಕೇಂದ್ರ ಸಚಿವ ಜೋಶಿ ಫುಲ್ ಗರಂ

ಧಾರವಾಡ; ದಿಶಾ ಸಭೆಯಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಹೆಚ್ಚುವರಿ ಕಾರ್ಯದರ್ಶಿ ಮಂಜುಳಾ‌ ಮೇಲೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಇಂದು ಫುಲ್​ ಗರಂ ಆದರು.

ಹುಬ್ಬಳ್ಳಿ ಹೊಸೂರ ಮೇಲ್ಸೆತುವೆಯಿಂದ ಚನ್ನಮ್ಮ ವೃತ್ತದವರೆಗೆ ಫ್ಲೈ ಒವರ್ ಮಾಡಿಸುವ‌ ವಿಚಾರವಾಗಿ ಹೆದ್ದಾರಿ ಪ್ರಾಧಿಕಾರದ ಅಧಿಕಾರಿ ಹುರಕಡ್ಲಿಗೆ ತರಾಟೆಗೆ ತೆಗೆದುಕೊಂಡ ಬಳಿಕ ಮಂಜುಳಾ ಹೆಸರು ಪ್ರಸ್ತಾಪ ವೇಳೆ ಮಂಜುಳಾ ಅವರ ಮೇಲೆ ಯಾರ ಅಪ್ಪನ ಮನೆಯು ಆಸ್ತಿ ಅಲ್ಲ ಇದು. ನಮ್ಮ ಅಪ್ಪನ ಮನೆ ಆಸ್ತಿಯೂ ಅಲ್ಲ ಎಂದು ಜೋಶಿ ಗರಂ ಆಗಿ ಪ್ರತಿಕ್ರಿಯಿಸಿದರು.

ಅವಳಿ ನಗರದ ಬಿಆರ್ಟಿಎಸ್ ಬಸ್ ನಿಲ್ದಾಣ ತೆರವು ಮಾಡಲು ಬಿಡದೇ ಇರುವುದಕ್ಕೆ ಅವಳು ಹಿಟ್ಲರ್ ಅಲ್ಲ, ನಾನು ಹೇಳಿದ್ರೂ ನಾಟಕ ಮಾಡ್ತಾರಾ ಎಂದು ಹೆದ್ದಾರಿ ಪ್ರಾಧಿಕಾರದ ಅಧಿಕಾರಿ ಎದುರು ಮಂಜುಳಾಗೆ ಜೋಶಿ ತರಾಟೆಗೆ ತೆಗೆದುಕೊಂಡರು.

ಏನಾದರು ಫ್ಲೈ ಒವರ್ ಕಾಮಗಾರಿ ವೇಳೆ ಬಸ್ ನಿಲ್ದಾಣ ತೆಗೆಯದೇ ಮುಂದಿನ ದಿನಗಳಲ್ಲಿ ನಾ ನೋಡ್ತೆನೆ. ಇದು ನನ್ನ ಡೈರೆಕ್ಷನ್ ಅದನ್ನ ಮಾಡಿ, ನೀವು ಅವರ ಸಭೆಗೆ ಹೋಗಬೇಡಿ,‌ ನಾನು ಹೇಳಿದ್ದನ್ನ ಮಾಡಿ ಎಂದು ಜೋಶಿ ಹೇಳಿದರು.

Exit mobile version