Site icon PowerTV

ಸಿಪಿವೈ ಚಾಲಕನಿಂದ ಚನ್ನಪಟ್ಟಣದಲ್ಲಿ ದೂರು ಸಲ್ಲಿಕೆ.!

ರಾಮನಗರ: ವಿಧಾನ ಪರಿಷತ್ ಸದಸ್ಯ ಸಿ.ಪಿ ಯೋಗೇಶ್ವರ್ ಅವರ ಕಾರಿನ ಮೇಲೆ ಚೆನ್ನಪಟ್ಟಣದಲ್ಲಿ ಜೆಡಿಎಸ್ ಕಾರ್ಯಕರ್ತರು ಕಲ್ಲು ಹಾಗೂ ಮೊಟ್ಟೆ ಎಸೆದ ಘಟನೆ ಬಗ್ಗೆ ಸಿಪಿವೈ ಕಾರು ಚಾಲಕ ದೂರು ನೀಡಿದ್ದಾರೆ.

ಇಂದು ವಿವಿಧ ಕಾಮಗಾರಿಗೆ ಶಂಕುಸ್ಥಾಪನೆಗೆ ಹೋಗಿದ್ದ ಸಿ.ಪಿ ಯೋಗೇಶ್ವರ್ ಅವರ ಕಾರಿನ ಮೇಲೆ ಕೆಲವರು ದಾಳಿ ಮಾಡಿದ್ದರು. ಈ ಬಗ್ಗೆ ಯೋಗೇಶ್ವರ ಅವರ ಕಾರು ಚಾಲಕ ವೆಂಕಟೇಶ್ ಚನ್ನಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.

ಕೆಎ 51 ಎಂಆರ್ 1818 ನಂಬರ್ ನ ಕಾರಿನಲ್ಲಿ ಸಿ.ಪಿ ಯೋಗೇಶ್ವರ್ ರವರು, ಆಪ್ತಸಹಾಯಕರು ಸೇರಿ ನಾನು ಕಾರಿನಲ್ಲಿ ಪ್ರಯಾಣ ಮಾಡ್ತಿದ್ದೆವು, ಈ ವೇಳೆ ಯೋಗೇಶ್ವರ್ ವಿರುದ್ಧ ಕೂಗಿಕೂಗಿ ಕಲ್ಲಿನಿಂದ ದಾಳಿ ಮಾಡಿದ್ದಾರೆ ಎಂದು ಜೆಡಿಎಸ್ ನ‌ 14 ಜನ ಕಾರ್ಯಕರ್ತರ ವಿರುದ್ಧ ಯೋಗೇಶ್ವರ್​ ಕಾರು ಚಾಲಕ ದೂರು ದಾಖಲಿಸಿದ್ದಾರೆ.

ಮುಂದುವರೆದ ಭಾಗವಾಗಿ ಸಿಪಿವೈ ಚಾಲಕ, ನಮಗೆ ಪ್ರಾಣಬೆದರಿಕೆ ಹಾಕಿದರು. ಅವಾಚ್ಯ ಶಬ್ದಗಳಿಂದ ನಿಂದಿಸಿದರು. ಇವರ ವಿರುದ್ಧ ಕಠಿಣ ಕಾನೂನು ಕ್ರಮವಹಿಸಿ ಎಂದು ದೂರು ನೀಡಿದ್ದಾರೆ.

Exit mobile version