Site icon PowerTV

ಐಸಿಯುನಿಂದ ಅಜ್ಜಿ ಕರೆಸಿ ಮಾನವೀಯತೆ ಮರೆತ ಬೆಳಗಾವಿ ಅಧಿಕಾರಿಗಳು.!

ಬೆಳಗಾವಿ: ಸಬ್ ರೆಜಿಸ್ಟರ್ ಕಚೇರಿಯ ಸಿಬ್ಬಂದಿಗಳು ಸಹಿ ಮಾಡಲು ಐಸಿಯುನಿಂದ ಕಚೇರಿಗೆ ಅಜ್ಜಿಯನ್ನ ಕರೆಸಿಕೊಂಡು ಅಮಾನವೀಯವಾಗಿ ನಡೆದುಕೊಂಡ ಘಟನೆ ಬೆಳಗಾವಿಯಲ್ಲಿ ನಡೆದಿದೆ.

ಆಸ್ತಿ ಹಂಚಿಕೆ, ಆಸ್ತಿ ಹಕ್ಕು ಬಿಟ್ಟ ಪತ್ರಕ್ಕೆ ಸಹಿ ಹಾಕುವ ವಿಚಾರಕ್ಕೆ ಸಂಬಂಧಿಸಿದಂತೆ ಸಬ್ ರೆಜಿಸ್ಟರ್ ಕಚೇರಿಯಲ್ಲಿ ನೊಂದಣಿ ಆಗಬೇಕಿತ್ತು. ಈ ಹಿನ್ನಲೆಯಲ್ಲಿ ಐಸಿಯು ಬೆಡ್ ಮೇಲೆ ಮಹಾದೇವಿ ಅಗಸಿಮನಿ (80) ಮಲಗಿದ್ದ ಸಬ್ ರೆಜಿಸ್ಟರ್ ಕಚೇರಿಗೆ ಸಹಿ ಮಾಡಲು ಬಂದು ಅಜ್ಜಿ ಪರದಾಡುವಂತಾಗಿದೆ.

ಮಹಾದೇವಿ ಅಗಸಿಮನಿ (80) ಹೆಬ್ಬಟ್ಟು ಒತ್ತಿ ಸಹಿ ಮಾಡಬೇಕಿತ್ತು. ಐಸಿಯುನಲ್ಲಿದ್ದ ಕಾರಣ ಅಜ್ಜಿ ಕುಟುಂಬಸ್ಥರ ಉಪ ನೋಂದಣಿ ಅಧಿಕಾರಿಗೆ ಆಸ್ಪತ್ರೆಗೆ ಬರಲು ಮನವಿ ಮಾಡಲಾಗಿತ್ತು. ಸಬ್ ರೆಜಿಸ್ಟರ್ ಕಚೇರಿಯ ನಿಯಮ ಪ್ರಕಾರ ಐಸಿಯು ನಲ್ಲಿದ್ದವರ ಸಹಿ ಮಾಡಲು ಅಧಿಕಾರಿಗಳೆ ಆಸ್ಪತ್ರೆಗೆ ತೆರಳಬೇಕು. ಆದರೆ, ಅಧಿಕಾರಿಗಳು ಆಸ್ಪತ್ರೆಗೆ ಸಹಿ ಮಾಡಿಸಿಕೊಳ್ಳಲು ಹೋಗದೆ ನಿರ್ಲಕ್ಷ್ಯ ತೋರಿದ್ದಾರೆ.

Exit mobile version