Site icon PowerTV

ಸಿಪಿವೈ ಕಾರಿನ ಗ್ಲಾಸ್​ ಪುಡಿಪುಡಿ; ಸಿಎಂ ಬಸವರಾಜ ಬೊಮ್ಮಾಯಿ ಖಂಡನೆ

ಬೆಂಗಳೂರು: ಇಂದು ರಾಮನಗರದಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಪಿ ಯೋಗಿಶ್ವರ್ ಅವರ ಮೇಲೆ ಕಲ್ಲು ಹಾಗೂ ಮೊಟ್ಟೆ ಎಸೆದಿರುವ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಪ್ರತಿಕ್ರಿಯಿಸಿ ಇಂತಹ ನಡೆ ಸರಿಯಲ್ಲ ಎಂದಿದ್ದಾರೆ.

ಸಿಪಿವೈ ಮೇಲೆ ನಡೆದ ದಾಳಿಯನ್ನು ನಾನು ಕಟುವಾಗಿ ಖಂಡಿಸುತ್ತೇನೆ. ವಿಷಯಗಳು ಏನೇ ಇರಲಿ ಅದನ್ನು ಕಾನೂನಾತ್ಮಕವಾಗಿ ಬಗೆಹರೆಸಿಕೊಳ್ಳಬೇಕು ಮತ್ತು ಯಾರು ಕಾನೂನು ಕೈಗೆತ್ತಿಕೊಳ್ಳಬಾರದು ಎಂದು ಸಿಎಂ ಹೇಳಿದರು.

ಇಂದು ಚನ್ನಪಟ್ಟಣ ತಾಲ್ಲೂಕಿನ ಬೈರಾಪಟ್ಟಣ ಗ್ರಾಮದಲ್ಲಿ ಶಂಕುಸ್ಥಾಪನೆ ಸಿಪಿವೈ ಹೋಗಿದ ವೇಳೆಯಲ್ಲಿ ಅವರ ಕಾರು ಕೆಎ 51 ಎಂಆರ್​​1818 ಸಂಖ್ಯೆಯ ಪೋರ್ಡ್ ಕಂಪನಿಯ ಎಂಡೋವರ್ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ಮಾಡಿದ್ದರು.

Exit mobile version