Site icon PowerTV

ವಿಜಯನಗರದಲ್ಲಿ ಮಳೆಯಿಂದ ಭಾರಿ ಅವಾಂತರ

ವಿಜಯನಗರ :  ಜಿಲ್ಲೆಯ ಹಲವೆಡೆ ಮಳೆ ಸುರಿದ ಪರಿಣಾಮ ಸಮಸ್ಯೆಗಳುಂಟಾಗಿದೆ. ಹಗರಿಬೊಮ್ಮನ ಹಳ್ಳಿ ತಾಲೂಕಿನ ಹಂಪಾಪಟ್ಟಣದ ತಿಗಳನ ಕೆರೆ ಕೋಡಿ ಬಿದ್ದಿದೆ.

ಮಗಿಮಾವಿನಹಳ್ಳಿ, ವ್ಯಾಸಪುರ, ರಾಯರಾಳು ತಾಂಡ ಬಳಿಯ ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿವೆ. ಹೊಸಪೇಟೆಯ ಐತಿಹಾಸಿಕ ರಾಯರ ಕೆರೆ ಪ್ರದೇಶದ ಜಮೀನುಗಳಿಗೆಲ್ಲಾ ನೀರು ನುಗ್ಗಿ ಬೆಳೆಗಳೆಲ್ಲಾ ನೀರು ಪಾಲಾಗಿವೆ. ಇದರಿಂದ ರೈತರಿಗೆ ಅಪಾರ ಪ್ರಮಾಣದ ನಷ್ಟ ಉಂಟಾಗಿದೆ. ಕಷ್ಟಪಟ್ಟು ಬೆಳೆದ ಬೆಳೆಗಳು ಜಲಾವೃತವಾಗಿದ್ದು, ನಷ್ಟವನ್ನು ಹೇಗೆ ಭರಿಸೋದು ಎನ್ನುವ ಆತಂಕದಲ್ಲಿ ರೈತರಿದ್ದಾರೆ.

Exit mobile version