Site icon PowerTV

ಬೆಂಗಳೂರಿನಲ್ಲಿ ‘ಯೆಲ್ಲೋ ಅಲರ್ಟ್’

ಬೆಂಗಳೂರು : ಪ್ರವಾಹ ಪರಿಸ್ಥಿತಿಯಿಂದ ಇತ್ತೀಚೆಗಷ್ಟೇ ಸಹಜ ಸ್ಥಿತಿಗೆ ಬಂದ ರಾಜ್ಯ ರಾಜಧಾನಿ ಬೆಂಗಳೂರಿಗೆ ಮತ್ತೆ ಮಳೆ ಆತಂಕ ಎದುರಾಗಿದೆ. ಇಂದು ಬೆಂಗಳೂರು ನಗರದಲ್ಲಿ ‘ಯೆಲ್ಲೋ ಅಲರ್ಟ್’ ಘೋಷಿಸಲಾಗಿದೆ.

ಬೆಂಗಳೂರು ನಗರವು ಸೆಪ್ಟಂಬರ್ ಮೊದಲ ವಾರದ ಸೃಷ್ಟಿಯಾಗಿದ್ದ ಅತೀವ ಮಳೆ, ಪ್ರವಾಹ ಪರಿಸ್ಥಿತಿಯಿಂದ ಕಂಗೆಟ್ಟಿತ್ತು. ಕಳೆದ ಎರಡು ವಾರದಿಂದ ಮಳೆ ಅಬ್ಬರ ತಗ್ಗಿದ್ದರಿಂದ ಎಲ್ಲವೂ ಸಹಜ ಸ್ಥಿತಿಗೆ ಮರಳಿತ್ತು. ಈಗ ಮತ್ತೆ ಮುಂಗಾರು ನಗರದಲ್ಲಿ ಜೋರಾಗಿ ಸುರಿಯುವ ಲಕ್ಷಣಗಳು ಕಂಡು ಬಂದಿವೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಬೆಂಗಳೂರು ನಗರ ಜಿಲ್ಲೆಗೆ ಇಂದು ಒಂದು ದಿನ ಸಾಧಾರಣದಿಂದ ಭಾರಿ ಮಳೆ ಸುರಿಯುವ ಹಿನ್ನೆಲೆಯಲ್ಲಿ ‘ಯೆಲ್ಲೋ ಅಲರ್ಟ್’ ಎಚ್ಚರಿಕೆ ನೀಡಲಾಗಿದೆ. ಅರಬ್ಬಿ ಸಮುದ್ರ ಹಾಗೂ ಬಂಗಾಳಕೊಲ್ಲಿ ಸಮುದ್ರದಲ್ಲಿ ಉಂಟಾದ ಮೇಲ್ಮ್ಲೈ ಸುಳಿಗಾಳಿ ತೀವ್ರತೆಯಿಂದಾಗಿ ಈ ರೀತಿಯ ಮಳೆ ವಾತಾವರಣ ಕಂಡು ಬರುತ್ತಿದೆ.

Exit mobile version