Site icon PowerTV

ಇಂದಿನಿಂದ ಯುವ ದಸರಾ ಆರಂಭ

ಮೈಸೂರು : ಇಂದಿನಿಂದ ಯುವ ದಸರಾ ಆರಂಭಗೊಳ್ಳಲಿದ್ದು, ಯುವ ದಸರಾಗೆ ಅಶ್ವಿನಿ ಪುನೀತ್ ರಾಜ್ ಕುಮಾರ್ ಚಾಲನೆ ನೀಡಲಿದ್ದಾರೆ.

ನಗರದಲ್ಲಿ, ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯಲಿರೋ ಯುವ ದಸರಾ, ಅಪ್ಪು ನಮನದ ಮೂಲಕ ಯುವ ದಸರಾ ಆರಂಭಗೊಳ್ಳಲಿದೆ. ನಟ ಕಿಚ್ಚ ಸುದೀಪ್ ಗೈರು ಹಿನ್ನಲೆಯಲ್ಲಿ ಒಂದು ದಿನ ಮುಂದೂಡಿದ್ದ ಯುವ ದಸರಾ ಸಮಿತಿ. ಸಂಜೆ 6:30 ಕ್ಕೆ ಯುವ ದಸರಾ ಆರಂಭವಾಗಲಿದೆ.

ಇನ್ನು, ಅಪ್ಪು ನಮನದಲ್ಲಿ ಗುರುಕಿರಣ್,ವಿಜಯ ಪ್ರಕಾಶ್, ಕುನಾಲ್ ಗಾಂಜಾವಾಲ ಹಾಡಿನ ಮೊಡಿ ಮಾಡಲಿದ್ದಾರೆ. ಮಧ್ಯಾಹ್ನ 12:30 ಕ್ಕೆ ಚಲನಚಿತ್ರೋತ್ಸವದಲ್ಲಿ ಅಪ್ಪು ದಿನ ಆಚರಿಸಲಿದ್ದು, ಐನಾಕ್ಸ್ ಚಿತ್ರಮಂದಿರದಲ್ಲಿ ಪುನೀತ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಿದ್ದಾರೆ.

Exit mobile version