Site icon PowerTV

PFI ಬ್ಯಾನ್​​ ಮಾಡಿದ್ದು ಸ್ವಾಗತಾರ್ಹ : ಶ್ರೀ ಸಿದ್ದಲಿಂಗ ಸ್ವಾಮೀಜಿ

ಕಲಬುರಗಿ : ದೇಶಾದ್ಯಂತ PFI ಸಂಘಟನೆಯನ್ನು 5 ವರ್ಷ ಬ್ಯಾನ್ ಮಾಡಿ ಕೇಂದ್ರ ಗೃಹ ಸಚಿವಾಲಯ ಆದೇಶ ಹೊರಡಿಸಿದೆ. ಈ ಕುರಿತು ಕಲಬುರಗಿಯಲ್ಲಿ ಮಾತನಾಡಿದ ಶ್ರೀರಾಮಸೇನೆ ರಾಜ್ಯಾಧ್ಯಕ್ಷ ಶ್ರೀ ಸಿದ್ದಲಿಂಗ ಸ್ವಾಮೀಜಿ, ಕೇಂದ್ರ ಸರ್ಕಾರ ದೇಶದ್ರೋಹಿ PFI ಸಂಘಟನೆಯನ್ನ ಬ್ಯಾನ್ ಮಾಡಿದ್ದು ಸ್ವಾಗತಾರ್ಹ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಸಮಾಜಸೇವೆಯ ಮುಖವಾಡ ಇಟ್ಟುಕೊಂಡು ಪಾಕಿಸ್ತಾನ ಜೊತೆ PFI ಸಂಬಂಧ ಇಟ್ಟುಕೊಂಡಿತ್ತು. ಪಾಕ್ ಜೊತೆ ಸಂಬಂಧ ಇಟ್ಟುಕೊಂಡು PFI ಭಾರತದಲ್ಲಿ ಅಹಿತಕರ ಘಟನೆಗೆ ಸಂಚು ರೂಪಿಸ್ತಿತ್ತು. ಈಗ ಕೇಂದ್ರ ಸರ್ಕಾರದ ನಿರ್ಧಾರದಿಂದ ಅಹಿತಕರ ಘಟನೆಗಳಿಗೆ ಬ್ರೇಕ್​​ ಬಿದ್ದಿದೆ ಎಂದ್ರು. PFI ಮತ್ತು SDPI ಮುಖಂಡರ ಬಂಧನದ ಕುರಿತು ಕೇಂದ್ರದ ವಿರುದ್ಧ HDK ವಾಗ್ದಾಳಿ ನಡೆಸಿರುವುದಕ್ಕೆ ಸ್ವಾಮೀಜಿ ತಿರುಗೇಟು ನೀಡಿದ್ದಾರೆ.
ಮುಸ್ಲಿಮರ ತುಷ್ಟೀಕರಣ ಅತೀಯಾದ್ರೆ ದೇಶಕ್ಕೆ ಆಪತ್ತು. ಮುಸ್ಲಿಮರ ಹೆಸರು ಬಂದ ತಕ್ಷಣ ಮೂಗು ತೂರಿಸುವ ಕೆಲಸವನ್ನು ಕುಮಾರಸ್ವಾಮಿ ನಿಲ್ಲಿಸಬೇಕು ಎಂದರು.

Exit mobile version