Site icon PowerTV

ಪ್ರೀತಂಗೌಡ ವಿರುದ್ಧ ಪ್ರಜ್ಚಲ್​​ ರೇವಣ್ಣ ವಾಗ್ದಾಳಿ

ಹಾಸನ : ಶಾಸಕ ಪ್ರೀತಂಗೌಡ ವಿರುದ್ಧ ಸಂಸದ ಪ್ರಜ್ವಲ್ ರೇವಣ್ಣ ವಾಗ್ದಾಳಿ ನಡೆಸಿದ್ದಾರೆ.

ನಗರದ ಅರಸೀಕೆರೆಯಲ್ಲಿ ಮಾತನಾಡಿದ ಸಂಸದ ಪ್ರಜ್ವಲ್ ರೇವಣ್ಣ, ಅವರು ಏನಾದರೂ ಚಾಲೆಂಜ್ ಹಾಕಿಕೊಳ್ಳಲಿ. ನಾನು ಅವರ ಓಟಿನಿಂದ ಗೆದ್ದಿಲ್ಲ, ಸಾರ್ವಜನಿಕರ ಓಟಿನಿಂದ ಗೆದ್ದಿರುವವನು ನಾನು. ಮೊದಲು ಅವರು ಗೆಲ್ಲೋದನ್ನ ನೋಡಿಕೊಳ್ಳಲಿ ಎಂದರು.

ವಿಧಾನಸಭೆ ಚುನಾವಣೆ ಆದ ಒಂದು ವರ್ಷ ಆದ ಮೇಲೆ MP ಚುನಾವಣೆ ಬರುತ್ತೆ. ಪ್ರೀತಂಗೌಡರ ಸೋಲು ಖಚಿತ. ಸೋತ ಮೇಲೆ ನನ್ನ ವಿರುದ್ಧ MP ಚುನಾವಣೆಯಲ್ಲಿ ಸ್ಪರ್ಧಿಸಲಿ. ಅವರು ನನ್ನನ್ನು ಈಗಾಗಲೇ ಸೋಲಿಸ್ತೀನಿ ಎಂದು ಬರೆದುಕೊಂಡಿದ್ದಾರೆ. ಆದರೆ MP ಚುನಾವಣೆಯ ಗೆಲುವಿನ ಕನಸನ್ನು ಬಿಡಲು ಹೇಳಿ ಎಂದ್ರು. ಚುನಾವಣೆಯ ನಂತರ ದುಡ್ಡು ಮಾಡಿಕೊಂಡು ಬೆಂಗಳೂರಿಗೆ ಹೋಗಬಹುದು ಎಂದು ಪ್ರೀತಂಗೌಡ ವಿರುದ್ಧ ಪ್ರಜ್ವಲ್​​ ರೇವಣ್ಣ ವಾಗ್ದಾಳಿ ನಡೆಸಿದ್ದಾರೆ.

Exit mobile version