Site icon PowerTV

ಸಿದ್ದರಾಮಯ್ಯರ ಉಗ್ರ ಭಾಗ್ಯಗಳಿಂದ 32 ಹಿಂದೂಗಳ ಹತ್ಯೆ; ಸಿಟಿ ರವಿ

ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಅವರ ಸರ್ಕಾರದ ಕಾಲದ ಉಗ್ರ ಭಾಗ್ಯ ಯೋಜನೆಯಿಂದ ಸುಮಾರು 32ಕ್ಕೂ ಹೆಚ್ಚು ಹಿಂದೂ ಕಾರ್ಯಕರ್ತರ ಹತ್ಯೆಯಾಯ್ತು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಅವರು ಹೇಳಿದ್ದಾರೆ.

ಪಿಎಫ್​ಐ ಬ್ಯಾನ್​ ಕುರಿತು ಕಾಂಗ್ರೆಸ್ ನಾಯ​ರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿಟಿ ರವಿ ಅವರು, ತನ್ವೀರ್ ಸೇಠ್ ಮೇಲೆ ಹಲ್ಲೆ ಮಾಡಿದ್ದು ಆರ್​ಎಸ್​ಎಸ್​​ನವರು ಅಲ್ಲ. ಸಿದ್ದರಾಮಯ್ಯ ಅವರ ಉಗ್ರ ಭಾಗ್ಯ ಯೋಜನೆ ಯಿಂದಲೇ ನಿಮಗೆ ಪೆಟ್ಟು ಬಿದ್ದಿದೆ. ನೀವು ಕೇಂದ್ರ ಸರ್ಕಾರದ ಪಿಎಫ್​ಐ ಬ್ಯಾನ್​ ನಿರ್ಧಾರವನ್ನು ಸ್ವಾಗತ ಮಾಡಬೇಕಿತ್ತು ಎಂದರು.

ಡಿಜಿ ಹಳ್ಳಿ, ಕೆಜೆ ಹಳ್ಳಿಯಲ್ಲಿ ರಾತ್ರಿ ಪೂರ್ತಿ ಕೊಳ್ಳಿ ದೆವ್ವಗಳು ನರ್ತನ ಮಾಡಿದವು, ಈ ಉಗ್ರ ಭಾಗ್ಯ ಯೋಜನೆಯಿಂದಲೇ ಕಾಂಗ್ರೆಸ್ ಶಾಸಕರ ಮನೆಗೆ ಬೆಂಕಿ‌ ಬಿದ್ದಿದ್ದು, ಇದನ್ನೆಲ್ಲ ಮರೆತು ಕೇವಲ ರಾಜಕೀಯ ಲಾಭದ ಆಸೆಗೆ ಏನೇನೋ ಮಾತಾಡೋದು ಸರಿಯಲ್ಲ ಎಂದು ಕಾಂಗ್ರೆಸ್ ನಾಯಕರಿಗೆ ಸಿಟಿ ರವಿ ತಿರುಗೇಟು ನೀಡಿದರು.

ಸುಣ್ಣ ಮತ್ತು ಬೆಣ್ಣೆ ಗುರುತಿಸಲಾಗದ ಸ್ಥಿತಿಗೆ ಸಿದ್ದರಾಮಯ್ಯ ಬಂದಿದ್ದಾರೆ. ಯಾವ ಭಯೋತ್ಪಾದನೆ ವಿಚಾರದಲ್ಲಿ ಆರ್​ಎಸ್​ಎಸ್​ಮುಂದಾಗಿದೆ ತೋರಿಸಲಿ, ತಮ್ಮ ರಾಜಕೀಯ ತೇವಲು ತೀರಿಸಿಕೊಳ್ಳಲು ಸಿದ್ದರಾಮಯ್ಯ ಮುಂದಾಗಿದ್ದಾರೆ. ಇಂತವರ ಮತಾಂದರಿಂದಲೇ ದೇಶ ವಿಭಜನೆಯಾಗಿದೆ. ರಾಷ್ಟ್ರವನ್ನ ಪ್ರೀತಿಸಿ ಅನ್ನೋದು ಭಯೋತ್ಪಾದನೆನಾ. ರಾಷ್ಟ್ರ ಭಕ್ತ ಯಾರು, ರಾಷ್ಟ್ರ ದ್ರೋಹಿ ಯಾರು ಅನ್ನೋದು ಗುರುತಿಸಲು ಸಿದ್ದರಾಮಯ್ಯ ಅವರಿಗೆ ಆಗಲ್ಲ. ಈ ಮನಸ್ಥಿತಿ ಇಂದ ಹೊರಗೆ ಬಾರದಿದ್ರೆ, ಕಾಂಗ್ರೆಸ್‌ಗೆ ಉಳಿಗಾಲವಿಲ್ಲ ಎಂದು ಸಿಟಿ ರವಿ ಹೇಳಿದರು.

Exit mobile version